Select Your Language

Notifications

webdunia
webdunia
webdunia
webdunia

‘ಕಾಂಗ್ರೆಸ್‍ನವರು ಪಾಕಿಸ್ತಾನದ ಕಾನೂನು ನಂಬ್ತಾರೆ’

‘ಕಾಂಗ್ರೆಸ್‍ನವರು ಪಾಕಿಸ್ತಾನದ ಕಾನೂನು ನಂಬ್ತಾರೆ’
bangalore , ಬುಧವಾರ, 20 ಏಪ್ರಿಲ್ 2022 (18:46 IST)
ರಾಜ್ಯದಲ್ಲಿ ಎಲ್ಲಿಯೇ ಕೊಮು ಗಲಭೆಗಳು ನಡೆದರೂ, ಇದರ ಹಿಂದೆ ನೇರವಾಗಿ ಕಾಂಗ್ರೆಸ್ ಕೈವಾಡ ಇರುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪ ಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹುಬ್ಬಳ್ಳಿ, ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದು ಸ್ಪಷ್ಟವಾಗಿದೆ. ಹುಬ್ಬಳ್ಳಿ ಕೋಮು ಗಲಭೆಯಲ್ಲಿ ಅಲ್ತಾಫ್ ಹಳ್ಳೂರ ಪ್ರಮುಖ ಆರೋಪಿ. ಆದರೆ ಕಾಂಗ್ರೆಸ್‌ ಇವರನ್ನು ವೇದಿಕೆ ಮೇಲೆ ಕುಳಿಸುತ್ತಾರೆ. ಇವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರೆಲ್ಲವೋ ಎಂಬುದನ್ನು ಸ್ಪಷ್ಟ ಪಡಿಸಲಿ. ಬೇಕಿದ್ದರೇ ನಾವು ಅದನ್ನು ಸಾಬೀತು ಪಡೆಸುತ್ತೇವೆ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

‘ಮೌಲ್ವಿ ಹೇಡಿ, ಓಡಿ ಹೋಗಿದ್ದಾನೆ’