Select Your Language

Notifications

webdunia
webdunia
webdunia
webdunia

‘ಮೌಲ್ವಿ ಹೇಡಿ, ಓಡಿ ಹೋಗಿದ್ದಾನೆ’

Maulvi cowards
bangalore , ಬುಧವಾರ, 20 ಏಪ್ರಿಲ್ 2022 (18:42 IST)
ಶಾಂತಿಯಿಂದ ಇದ್ದಂತಹ ರಾಜ್ಯವನ್ನು ಕೊಲೆ, ಗಲಭೆ ನಿರ್ಮಾಣ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಹುಬ್ಬಳ್ಳಿ ಗಲಭೆಯಲ್ಲಿ ಮೌಲ್ವಿ ಪ್ರಚೋದನೆ ಮಾಡುವ ವಿಡಿಯೋ ನೋಡಿದ್ದೇನೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅವರು ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡೆದಿರುವುದನ್ನು ನೋಡಿದ್ದೇವೆ. ಆರ್‌ಎಸ್‍ಎಸ್ ಮುರ್ದಾಬಾದ್ ಘೋಷಣೆ ಕೂಗಿದ್ದಾರೆ. ಕಲ್ಲು ತೂರಾಟ ಮಾಡಿರುವ ಪುಂಡರನ್ನ ನೇರವಾಗಿ ಎದುರಿಸುವ ಶಕ್ತಿ ಹಿಂದೂ ಸಂಘಟನೆಗೆ ಇದೆ. ಆದರೆ ಕಾನೂನು ಕೈಗೆ ತೆಗೆದುಕೊಳ್ಳಲು ಹೋಗಲ್ಲ. ಆ ಮೌಲ್ವಿ ಹೇಡಿಯಂತೆ ಓಡಿ ಹೋಗಿದ್ದಾನೆ. ದೇಶದ್ರೋಹ ಮಾಡಿ, ಗೂಂಡಾಗಿರಿ ಮಾಡಿ ಓಡಿ ಹೋಗಿರುವ ರಾಷ್ಟ್ರ ದ್ರೋಹಿ ಮೌಲ್ವಿಯನ್ನು ಬಂಧಿಸುವಂತೆ ಪ್ರಧಾನಿ ಹಾಗೂ ಅಮಿತ್ ಶಾ ಅವರಲ್ಲಿ ಒತ್ತಾಯಿಸುತ್ತೇನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಪುರಾವೆ ಆಧರಿಸಿ ಆರೋಪಿಗಳ ಬಂಧನ