Select Your Language

Notifications

webdunia
webdunia
webdunia
webdunia

ಅಲ್ಪಸಂಖ್ಯಾತರ ಪರ ಆನಂದ್ ಸಿಂಗ್​ ಮಾತು

ಅಲ್ಪಸಂಖ್ಯಾತರ ಪರ ಆನಂದ್ ಸಿಂಗ್​ ಮಾತು
bangalore , ಗುರುವಾರ, 21 ಏಪ್ರಿಲ್ 2022 (18:47 IST)
ಅಲ್ಪಸಂಖ್ಯಾತರ ಅಮಾಯಕತನವನ್ನು ಬಳಸಿಕೊಂಡು ಜಾತಿ ವಿಷ ಬೀಜ ಬಿತ್ತಿ ಪ್ರಚೋದನೆ ಮಾಡುತ್ತಾರೆ ಎಂದು ಬಿಜೆಪಿ ಶಾಸಕ ಆನಂದ್ ಸಿಂಗ್ ಅಲ್ಪಸಂಖ್ಯಾತರ ಪರ ಬ್ಯಾಟ್ ಬೀಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರು ಮುಗ್ಧ ಜನರು. ಅಮಾಯಕರು ಇರೋರಲ್ಲಿ ಕೆಲ ಬುದ್ದಿವಂತ ಲೀಡರ್​​​​​ಗಳಿದ್ದಾರೆ. ಅವರೆಲ್ಲಾ ಇವರನ್ನು ಕಂಟ್ರೋಲ್ ಮಾಡುತ್ತಾರೆ. ಈ ಹಿಂದೆ ಸಿಎಎ ಎನ್‍ಆರ್​​​ಸಿ ಬಗ್ಗೆ ಪ್ರತಿಭಟನೆಗೆ ಕರೆದಿದ್ದರು. ನಾನು ಅವರನ್ನು ಕೇಳಿದೆ, ಎಲ್ಲಿಗೆ ಹೋಗಿದ್ರಿ ಅಂತ. ಅದಕ್ಕೆ ಅವರು ಅದೇನೋ ಕರೆದಿದ್ದರು ಸರ್ ಹೋಗಿದ್ದೆವು ಅಂದರು. ಅವರು ಅಮಾಯಕರಿದ್ದಾರೆ, ಅಂತಹ ಟೈಮಲ್ಲಿ ಕೆಲವರು ಪ್ರಚೋದನೆ ಮಾಡುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಕಾಮನ್ ಮ್ಯಾನ್ ಆಗಿ ಹೇಳ್ತೀನಿ, ಅವರು ಅಮಾಯಕರು. ಅವರ ಅಮಾಯಕತನವನ್ನು ಬಳಸಿಕೊಂಡು ಜಾತಿ ವಿಷ ಬೀಜ ಬಿತ್ತಿ ಪ್ರಚೋದನೆ ಮಾಡುತ್ತಾರೆ. ಅವರ ತಲೆ ತಿಕ್ಕುವ ಕೆಲಸ ನಡೀತಾ ಇದ್ದು, ಅದು ಕಾಂಗ್ರೆಸ್ ಪಕ್ಷದಿಂದ ನಡೀತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗಲಭೆಗೆ ಕಾರಣವಾಯ್ತಾ ಲೇಸರ್​​ ಲೈಟ್.​.?