Select Your Language

Notifications

webdunia
webdunia
webdunia
Monday, 7 April 2025
webdunia

ವಾಟ್ಸಾಪ್ ನಲ್ಲಿ ಜಬರದಸ್ತ್ ಫೀಚರ್!

ವಾಟ್ಸಾಪ್
ನವದೆಹಲಿ , ಶುಕ್ರವಾರ, 22 ಏಪ್ರಿಲ್ 2022 (12:20 IST)
ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್ಫಾರ್ಮ್ ಹೊಸ ವೈಶಿಷ್ಟ್ಯವೊಂದನ್ನು ಬಿಡುಗಡೆ ಮಾಡುತ್ತಿದ್ದು ಅಪ್ಲಿಕೇಶನ್ನಲ್ಲಿ ನಿಮ್ಮ ಲಾಸ್ಟ್ ಸೀನ್,

ಅಬೌಟ್ ಹಾಗೂ ಪ್ರೊಫೈಲ್ ಫೋಟೋ ನಿರ್ವಹಣೆ ಈಗ ಇನ್ನೂ ಸುಲಭವಾಗಲಿದೆ. ಈವರೆಗೆ ಕೇವಲ Nobody, Everyone, My Contactsಗೆ ಸೀಮಿತವಾಗಿದ್ದ ವೈಶಿಷ್ಟ್ಯ ಈಗ ಹೊಸ ಅಪ್ಡೇಟ್ನೊಂದಿಗೆ ಬಿಡುಗಡೆಯಾಗಲಿದೆ ಎಂದು ವರದಿಗಳು ಸೂಚಿಸಿವೆ. 

ವಾಟ್ಸಾಪ್ ಬೀಟಾ ವೈಶಿಷ್ಟ್ಯವೊಂದನ್ನು ಹೊರತರುತ್ತಿದ್ದು, ಬಳಕೆದಾರರು ತಮ್ಮ ಲಾಸ್ಟ್ ಸೀನ್ ಸ್ಥಿತಿ, ಪ್ರೊಫೈಲ್ ಫೋಟೋ ಮತ್ತು ಅಬೌಟ್  ಮಾಹಿತಿಯನ್ನು ನಿರ್ದಿಷ್ಟ ಕಾಂಟ್ಯಾಕ್ಟ್ಸ್ಗಳಿಂದ ಮರೆಮಾಡಲು ಸಾಧ್ಯವಾಗಲಿದೆ.

ಅಂದರೆ ನೀವು ಮರೆಮಾಡಿದ ಕಾಂಟ್ಯಾಕ್ಟಸ್ ನಿಮ್ಮ ಲಾಸ್ಟ್ ಸೀನ, ಪ್ರೊಫೈಲ್ ಫೋಟೋ ಮತ್ತು ಅಬೌಟ್ ನೋಡಲು ಸಾಧ್ಯವಾಗುವುದಿಲ್ಲ, ಆದರೆ ಇತರರು  ಅವುಗಳನ್ನು ನೋಡಬಹುದು.

Wabetainfo ಪ್ರಕಾರ, ಪ್ರಸ್ತುತ iOS 22.9.0.70 ವಾಟ್ಸಾಪ್ ಬೀಟಾವನ್ನು ಬಳಸುವವರಿಗೆ ಈ ವೈಶಿಷ್ಟ್ಯ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಏಪ್ರಿಲ್ 16 ರಂದು ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗಿದ್ದು  Wabetainfo ವರದಿ ಪ್ರಕಾರ, ಇದನ್ನು ಶೀಘ್ರದಲ್ಲೇ ಆಂಡ್ರಾಯ್ಡ್ ಸೇರಿದಂತೆ ಹೆಚ್ಚಿನ ಸಾಧನಗಳಿಗೆ ಬಿಡುಗಡೆಯಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಉತ್ಪಾದನೆ ತೀವ್ರ ಕುಸಿತ?