Select Your Language

Notifications

webdunia
webdunia
webdunia
webdunia

ಫ್ಯಾಶನ್ ಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ ಕಾಮನ್ : ಕಂಗನಾ

webdunia
ನವದೆಹಲಿ , ಬುಧವಾರ, 4 ಮೇ 2022 (15:43 IST)
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ತಮ್ಮ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಚಿತ್ರೋದ್ಯಮ ಮತ್ತು ಫ್ಯಾಶನ್ ಲೋಕದಲ್ಲಿ ಲೈಂಗಿಕ ದೌರ್ಜನ್ಯ ಎನ್ನುವುದು ಕಾಮನ್ ಅನ್ನುವಂತಾಗಿದೆ. ಅದರ ವಿರುದ್ಧ ನಾನು ಧ್ವನಿ ಎತ್ತಿದಾಗ ನನಗೆ ಚಿತ್ರೋದ್ಯಮದಿಂದಲೇ ಬಹಿಷ್ಕಾರ ಹಾಕಲಾಯಿತು ಎಂದಿದ್ದಾರೆ. 

ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾದ ಸೈಶಾ ಶಿಂಧು ತಮಗಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡರು. ‘ನಾನು ಫ್ಯಾಶನ್ ಲೋಕದಲ್ಲಿ ಕೆಲಸ ಮಾಡುವಾಗ ಟಾಪ್ ಡಿಸೈನರ್ ಒಬ್ಬರು ನನ್ನನ್ನು ಹೋಟೆಲ್ ಗೆ ಕರೆದುಕೊಂಡು ಹೋದರು.

ಅವರ ನೋವುಗಳನ್ನು ಮತ್ತು ಅವರ ಖಾಸಗಿ ಜೀವನದಲ್ಲಿ ನಡೆದ ಘಟನೆಯನ್ನು ಹೇಳಿಕೊಂಡರು. ನಾನೂ ಅವರ ನೋವಿಗೆ ಮರುಗಿದೆ. ಅದನ್ನೇ ಅವರು ದುರಪಯೋಗ ಪಡೆಸಿಕೊಂಡು ದೌರ್ಜನ್ಯ ಎಸೆಗಿದರು. ಅದನ್ನು ನಾನು ವಿರೋಧಿಸಿದ್ದಕ್ಕೆ ನನ್ನ ಬಗ್ಗೆ ಅಪಪ್ರಚಾರ ಮಾಡಿದರು ಎಂದು ನೋವು ಹೇಳಿಕೊಂಡರು.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್ ?