Select Your Language

Notifications

webdunia
webdunia
webdunia
webdunia

ಮಗು ಕೊಂದು ಅಪಘಾತ ನಾಟಕ ಕಟ್ಟಿದ! ಮುಂದೇನಾಯ್ತು?

ಮಗು ಕೊಂದು ಅಪಘಾತ ನಾಟಕ ಕಟ್ಟಿದ! ಮುಂದೇನಾಯ್ತು?
ದೆಹಲಿ , ಗುರುವಾರ, 21 ಏಪ್ರಿಲ್ 2022 (14:01 IST)
ಲಾರಿ ಚಾಲಕನಾಗಿದ್ದ ತೂಬಗೆರೆ ದೀಪು, ತನ್ನ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳ ಜತೆ ಅತ್ತಿಬೆಲೆ ಸಮೀಪದ ನೆಲ್ಲೂರಹಳ್ಳಿಯಲ್ಲಿ ನೆಲೆಸಿದ್ದ.
 
ಮಾ.20ರಂದು ತನ್ನ ನಾದಿನಿಯ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕವಾಗಿ ಶೋಷಿಸಿದ್ದ. ಆ ವೇಳೆ ಮಗು ಕೂಗಿಕೊಂಡಿದ್ದಕ್ಕೆ ಕೋಪಗೊಂಡ ದೀಪು, ಮಗುವಿಗೆ ಕಪಾಳಕ್ಕೆ ಹೊಡೆದಿದ್ದ.

ಇದರಿಂದ ಮಗು ಪ್ರಜ್ಞಾಹೀನವಾಯಿತು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಮಗುವಿನ ಜೀವ ಉಳಿಯಲಿಲ್ಲ. ಆದರೆ, ಚಿಕಿತ್ಸೆ ನೀಡಿದ ವೈದ್ಯರಿಗೆ ಕಾರಿನಲ್ಲಿ ಹೋಗುವಾಗ ಹಂಫ್ಸ್ನಲ್ಲಿ ಬ್ರೇಕ್ ಹಾಕಿದ್ದರಿಂದ ಮಗುವಿಗೆ ಪೆಟ್ಟಾಯಿತು ಎಂದು ಹೇಳಿದ್ದ.

ಈ ಮಾತಿನಿಂದ ಅನುಮಾನಗೊಂಡ ವೈದ್ಯರು, ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅನಂತರ ಮಗುವಿನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದಾಗ ಸಾವಿಗೂ ಮುನ್ನ ಮಗುವಿನ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ನಡೆದಿದ್ದ ಸಂಗತಿ ಬಯಲಾಯಿತು.

 ಈ ವರದಿ ಆಧರಿಸಿ ಪೊಕ್ಸೋ ಕಾಯ್ದೆ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡ ಅತ್ತಿಬೆಲೆ ಪೊಲೀಸರು, ಆರೋಪಿಯನ್ನು ಬಂಧಿಸಿ ಮಾ.28ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಿಟ್ಟಿದ್ದರು. ಜೈಲಿಗೆ ಬಂದ ಆರೋಪಿಗೆ ಜೈಲು ಆವರಣದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ತನ್ನ ಕೃತ್ಯದಿಂದ ಪಶ್ಚಾತ್ತಾಪಪಟ್ಟಿದ್ದ ಆತ, ಶನಿವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು, ಲೈಂಗಿಕ ದೌರ್ಜನ್ಯ, ಅಪಘಾತ ಲಾರಿ ಚಾಲಕನಾಗಿದ್ದ ತೂಬಗೆರೆ ದೀಪು, ತನ್ನ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳ ಜತೆ ಅತ್ತಿಬೆಲೆ ಸಮೀಪದ ನೆಲ್ಲೂರಹಳ್ಳಿಯಲ್ಲಿ ನೆಲೆಸಿದ್ದ.

ಮಾ.20ರಂದು ತನ್ನ ನಾದಿನಿಯ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕವಾಗಿ ಶೋಷಿಸಿದ್ದ. ಆ ವೇಳೆ ಮಗು ಕೂಗಿಕೊಂಡಿದ್ದಕ್ಕೆ ಕೋಪಗೊಂಡ ದೀಪು, ಮಗುವಿಗೆ ಕಪಾಳಕ್ಕೆ ಹೊಡೆದಿದ್ದ.

ಇದರಿಂದ ಮಗು ಪ್ರಜ್ಞಾಹೀನವಾಯಿತು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಮಗುವಿನ ಜೀವ ಉಳಿಯಲಿಲ್ಲ. ಆದರೆ, ಚಿಕಿತ್ಸೆ ನೀಡಿದ ವೈದ್ಯರಿಗೆ ಕಾರಿನಲ್ಲಿ ಹೋಗುವಾಗ ಹಂಫ್ಸ್ನಲ್ಲಿ ಬ್ರೇಕ್ ಹಾಕಿದ್ದರಿಂದ ಮಗುವಿಗೆ ಪೆಟ್ಟಾಯಿತು ಎಂದು ಹೇಳಿದ್ದ.

ಈ ಮಾತಿನಿಂದ ಅನುಮಾನಗೊಂಡ ವೈದ್ಯರು, ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅನಂತರ ಮಗುವಿನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದಾಗ ಸಾವಿಗೂ ಮುನ್ನ ಮಗುವಿನ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ನಡೆದಿದ್ದ ಸಂಗತಿ ಬಯಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ!