Publish Date: Fri, 24 Nov 2017 (16:51 IST)
Updated Date: Fri, 24 Nov 2017 (16:54 IST)
ಸೆಲ್ಫಿ ಮಾಡುವಂತಹ ಅವಾಂತರ ಒಂದಲ್ಲ ಎರಡಲ್ಲ ಸಾವಿರಾರು. ಸೆಲ್ಫಿ ತೆಗೆಯುವಾಗ ಸಾವನ್ನಪ್ಪಿರುವ ಅನೇಕ ಘಟನೆಗಳು ನಡೆದರೂ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ.
ಅನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ಮಹಾನುಭಾನೊಬ್ಬ ಆನೆಯಿಂದಲೇ ತುಳಿಸಿಕೊಂಡು ಸಾವನ್ನಪ್ಪಿದ್ದ ಹೇಯ ಘಟನೆ ವರದಿಯಾಗಿದೆ.
ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಹೆದ್ದಾರಿಯಲ್ಲಿ ಆನೆಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಹುಚ್ಚಿನಿಂದ ವಾಹನದಿಂದ ಇಳಿದು ಆನೆಯ ಸೆಲ್ಫಿ ತೆಗೆಯುತ್ತಿರುವಾಗಲೇ ಆನೆಯ ದಾಳಿಗೆ ಬಲಿಯಾಗಿದ್ದಾನೆ.
ಜಲಪೈಗುರಿ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದಲ್ಲಿ ಸಾಗುತ್ತಿದ್ದ 40 ವರ್ಷ ವಯಸ್ಸಿನ ಬ್ಯಾಂಕ್ ಭದ್ರತಾ ಸಿಬ್ಬಂದಿ ಸಾಧಿಕ್ ರೆಹಮಾನ್, ದಾರಿಯಲ್ಲಿ ಬಂದ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಉದ್ದೇಶದಿಂದ ಕೆಳಗಿಳಿದು ಫೋಟೋ ತೆಗೆಯಲು ಪ್ರಯತ್ನಿಸಿದ್ದಾನೆ.
ಸಾದಿಕ್ ಮೇಲೆ ಆನೆ ದಾಳಿ ಮಾಡಿದಾಗ ಸ್ಥಳದಲ್ಲಿಯೇ ಇದ್ದ ಸಾರ್ವಜನಿಕರು ಅಸಹಾಯಕರಾಗಿ ಮೂಕ ಪ್ರೇಕ್ಷಕರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಾಧಿಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗದೇ ಸಾವನ್ನಪ್ಪಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.