Publish Date: Fri, 24 Nov 2017 (15:34 IST)
Updated Date: Fri, 24 Nov 2017 (15:36 IST)
ಮುಂಬರುವ 2019ರೊಳಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಲಾದ ಧರ್ಮಸಂಸದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ದೇಗುಲಗಳು ಮಠ ಮಾನ್ಯಗಳು ಸರಕಾರದ ಹಿಡಿತದಿಂದ ಮುಕ್ತಾಯವಾಗಬೇಕು. ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕು ಎಂದು ಕರೆ ನೀಡಿದ್ದಾರೆ.
ಹಿಂದುಗಳು ಒಗ್ಗಟ್ಟಿನಿಂದಿರಬೇಕು. ವೀರಶೈವರು ಮತ್ತು ಲಿಂಗಾಯುತರು ಹಿಂದು ಧರ್ಮದವರೇ ಆಗಿರುವುದರಿಂದ ಪರಸ್ಪರರಲ್ಲಿನ ಭಿನ್ನಮತಕ್ಕೆ ಅಂತ್ಯಹಾಡಬೇಕು ಎಂದು ಮನವಿ ಮಾಡಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಿಂದುಗಳು ಕಟಿಬದ್ಧರಾಗಿದ್ದಾರೆ. ಹಿಂದುಗಳು ಒಗ್ಗಟ್ಟಿನಿಂದ ಹೋರಾಡಿ ಜಯಸಾಧಿಸುವಂತಹ ಅನಿವಾರ್ಯತೆ ಎದುರಾಗಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.