ಜೀವಕ್ಕಿಂತ ಹೆಚ್ಚಿಗೆ ಪ್ರೀತಿಸುವ ಪ್ರಿಯತಮ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದು ಬೇಸರಗೊಂಡ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ನಗರದ ಎಸ್.ಎಸ್.ಪುರಂ ಬಡಾವಣೆಯ ನಿವಾಸಿಯಾದ ಯುವತಿ, ನಿದ್ರೆ ಮಾತ್ರೆಗಳನ್ನು ನುಂಗುತ್ತಿರುವ ಸೆಲ್ಫಿ ವಿಡಿಯೋ ತೆಗೆದು ಆತ್ಮಹತ್ಯೆಗೆ ಯತ್ನಿಸಿ ತನ್ನ ಪ್ರಿಯಕರಿಗೆ ವಿಡಿಯೋ ಕಳಹಿಸಿಕೊಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವತಿ ಸುಮಾರು 70 ನಿದ್ರಾ ಮಾತ್ರೆಗಳನ್ನು ಸೇವಿಸಿದ್ದಾಳೆ ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸೆಲ್ಫಿ ವಿಡಿಯೋದಲ್ಲಿ, ನಾನು ನಿನಗೆ ಇನ್ನೊಮ್ಮೆ ತೊಂದರೆ ಕೊಡಲ್ಲ ದಯವಿಟ್ಟು ಕ್ಷಮಿಸು. ನನ್ನಿಂದ ಯಾರಿಗೂ ನೋವಾಗುವುದನ್ನು ನೋಡಲು ನನಗಿಷ್ಟವಾಗುವುದಿಲ್ಲ ಎಂದು ತಿಳಿಸಿದ್ದಾಳೆ
ಪ್ರಿಯತಮೆಯ ವಿಡಿಯೋ ನೋಡಿ ಕಂಗಾಲಾದ ಪ್ರಿಯಕರ ಕೂಡಲೇ ಯುವತಿ ವಾಸಿಸುತ್ತಿದ್ದ ಹಾಸ್ಟೆಲ್‌ಗೆ ಧಾವಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾನೆ. ಆತ್ಮಹತ್ಯೆ ಯತ್ನ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!