Select Your Language

Notifications

webdunia
webdunia
webdunia
webdunia

ಪುತ್ರಿಯ ಮೇಲೆ ನಿರಂತರ ಅತ್ಯಾಚಾರ: ಆರೋಪಿ ಬಂಧನ

Daughter
ಆರೋಪಿ ದೆಹಲಿಯ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ 2 ನೇ ಪತ್ನಿ ಜತೆ ವಾಸವಾಗಿದ್ದ. ಕಳೆದ ನಾಲ್ಕು ತಿಂಗಳ ಹಿಂದೆ ಮಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸುವುದಾಗಿ ಕೋಲ್ಕತಾಗೆ ಕರೆತಂದಿದ್ದ. ಮಗಳನ್ನು ಶೋಭಾ ಅಪಾರ್ಟ್‌ಮೆಂಟ್‌ಗೆ ಒಯ್ದು ಅಲ್ಲಿ ಮಗಳೆನ್ನುವ ಮಮಕಾರವನ್ನು ಇಟ್ಟುಕೊಳ್ಳದೇ ಅಮಾನುಷವಾಗಿ ಅತ್ಯಾಚಾರವೆಸಗಿ ಇದೀಗ ಜೈಲು ಪಾಲಾದ ಘಟನೆ ವರದಿಯಾಗಿದೆ.
 
ಆರೋಪಿ ತಂದೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಗಳು ದೂರು ದಾಖಲಿಸಿದ್ದಾಳೆ. 
 
ಕಾಮುಕ ತಂದೆ ತಾನು ಹುಟ್ಟಿಸಿದ ಮಗಳ ಮೇಲೆ ಮೂರು ತಿಂಗಳ ಕಾಲ ಅತ್ಯಾಚಾರದ ಪೈಶಾಚಿಕ ಕೃತ್ಯವೆಸಗಿದ್ದಾನೆಂದು ಸ್ವತಃ ಮಗಳೇ ಪೊಲೀಸರಿಗೆ ದೂರು ನೀಡಿದ್ದಾಳೆ.
 
ಆರೋಪಿ ಬಿಹಾರ ಮೂಲದವನೆಂದು ಹೇಳಲಾಗಿದ್ದು, ಬಿಹಾರಕ್ಕೆ ಹೋಗಿದ್ದ ಅವನನ್ನು ವಾಪಸ್ ಬಂದ ಕೂಡಲೇ ಪೊಲೀಸರು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು