Select Your Language

Notifications

webdunia
webdunia
webdunia
webdunia

ಕಾರಿನಲ್ಲಿಯೇ ಯುವತಿಯನ್ನು ಅಪಹರಿಸಿ ನಿರಂತರ ಅತ್ಯಾಚಾರ

young women
ದೆಹಲಿ , ಶುಕ್ರವಾರ, 17 ನವೆಂಬರ್ 2023 (17:00 IST)
ದಕ್ಷಿಣ ದೆಹಲಿಯ ನೆಬ್ ಸರಾಯಿ ಪ್ರದೇಶದಲ್ಲಿ ಟ್ಯೂಶನ್‌ಗಾಗಿ ತೆರಳುತ್ತಿರುವ ಸಂದರ್ಭದಲ್ಲಿ ಕಾಮುಕರು ಅಪಹರಿಸಿ ನಾಲ್ಕು ಮಂದಿ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
 
ದೇಶದ ರಾಜಧಾನಿ ನವದೆಹಲಿಗೂ ಅತ್ಯಾಚಾರ ಪ್ರಕರಣಗಳಿಗೂ ಬಿಡಸಲಾರದಂತಹ ನಂಟಿದೆ ಎಂದು ಕಾಣುತ್ತದೆ. ಪ್ರತಿನಿತ್ಯ ಕಾಮುಕರು ಅಟ್ಟಹಾಸ ಮೆರೆಯುತ್ತಿದ್ದಾರೆ. ಇದೀಗ 20 ವರ್ಷ ವಯಸ್ಸಿನ ಯುವತಿಯನ್ನು ದೆಹಲಿಯಿಂದ ಅಪಹರಿಸಿ ಮಥುರಾ ನಗರಕ್ಕೆ ಕರೆದುಕೊಂಡು ಹೋಗಿ ಕಾಮುಕರು ಅತ್ಯಾಚಾರವೆಸಗಿದ್ದಾರೆ.
 
ಆರೋಪಿಗಳು ನಿರಂತರವಾಗಿ ಅತ್ಯಾಚಾರವೆಸಗಿ ನಂತರ ಅಪಹರಿಸಿದ ಸ್ಥಳದಲ್ಲಿಯೇ ವಾಪಸ್ ಕರೆದುಕೊಂಡು ಬಿಟ್ಟಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸ್ ಜಾಲವನ್ನು ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸದನ ಪುತ್ರನ ವಿರುದ್ಧ ಯುವತಿಗೆ ವಂಚನೆ ಆರೋಪ