Select Your Language

Notifications

webdunia
webdunia
webdunia
webdunia

ನಾಲ್ವರು ಆರೋಪಿಗಳಿಂದ ಮಹಿಳೆಯ ಮೇಲೆ ಗ್ಯಾಂಗ್‌ರೇಪ್

ನಾಲ್ವರು ಆರೋಪಿಗಳಿಂದ ಮಹಿಳೆಯ ಮೇಲೆ ಗ್ಯಾಂಗ್‌ರೇಪ್
jhansi , ಶುಕ್ರವಾರ, 17 ನವೆಂಬರ್ 2023 (14:14 IST)
ಮಹಿಳೆಯ ಮೇಲೆ ನಾಲ್ಕು ಮಂದಿ ಆರೋಪಿಗಳು ನಿರಂತರ ಅತ್ಯಾಚಾರವೆಸಗಿ ತಲೆ ಮತ್ತು ಕುತ್ತಿಗೆಯನ್ನು ಬಲವಾಗಿ ಗಾಯಗೊಳಿಸಿ, ಕಣ್ಣು ಕಿತ್ತು ಹಾಕಿ ಟೆಂಪೋದಿಂದ ಹೊರಗೆ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಮಹಿಳೆಯ ಮೇಲೆ ನಾಲ್ವರು ಆರೋಪಿಗಳು ಟೆಂಪೋವೊಂದರಲ್ಲಿ ಅತ್ಯಾಚಾರವೆಸಗಿದ್ದಲ್ಲದೇ ಆಕೆಯನ್ನು ಮನಬಂದಂತೆ ಥಳಿಸಿ, ಕಣ್ಣು ಕಿತ್ತು ಹಾಕಿ ಹತ್ಯೆಗೈದ ಹೇಯ ಘಟನೆ ವರದಿಯಾಗಿದೆ.
 
ಉತ್ತರಪ್ರದೇಶದ ಜಿಲ್ಲಾ ಕೇಂದ್ರದಿಂದ 14 ಕಿ.ಮೀ ದೂರದಲ್ಲಿರುವ ಗ್ರಾಮದ ಪ್ರದೇಶದಲ್ಲಿದ್ದ ತನ್ನ ಆರು ವರ್ಷದ ಪುತ್ರಿಯನ್ನು ಕರೆದುಕೊಂಡು ಬರಲು ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದಾಗ ಅತ್ಯಾಚಾರ ಘಟನೆ ನಡೆದಿದೆ.
 
ಟೆಂಪೋದಿಂದ ಮಹಿಳೆಯನ್ನು ಹೊರಗೆ ಎಸೆಯುತ್ತಿರುವುದನ್ನು ಕಂಡ ಸ್ಥಳೀಯರು, ಗಾಯಗೊಂಡ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ಮತ್ತಿಬ್ಬರ ಆರೋಪಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಟೆಲ್ ಮೇಲೆ ಪೊಲೀಸ್ ರೈಡ್: ಅಸಭ್ಯ ಭಂಗಿಗಳಲ್ಲಿದ್ದವರು ಜೈಲು ಪಾಲು