Publish Date: Fri, 17 Nov 2023 (13:10 IST)
Updated Date: Fri, 17 Nov 2023 (13:11 IST)
ಪೊಲೀಸರು ಕಾನ್ಪುರದ ಗಿರಿಜಾ ಹೊಟೆಲ್ ಮೇಲೆ ದಾಳಿ ಮಾಡಿದಾಗ ಯುವಕರು ಮತ್ತು ಯುವತಿಯರು ಅಸಭ್ಯ ಭಂಗಿಗಳಲ್ಲಿ ಕಾಮಕೇಳಿಯಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಹೊಟೆಲ್‌ನಲ್ಲಿ ಸೆಕ್ಸ್ ಜಾಲವನ್ನು ನಡೆಸುತ್ತಿದ್ದ ಇಬ್ಬರು ನೌಕರರು ಮತ್ತು ಹೊಟೆಲ್ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಸ್‌ನಲ್ಲಿ ತೊಡಗಿದ್ದ ಸುಮಾರು 20 ಬಾಲಕರು ಮತ್ತು ಬಾಲಕಿಯರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಈ ಯುವತಿಯರು ಮತ್ತು ಯುವಕರು ಕಾಯಂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರಲಿಲ್ಲ. ವಾಸ್ತವವಾಗಿ ಅವರು ವಿದ್ಯಾರ್ಥಿಗಳಾಗಿದ್ದು, ದಂಪತಿ ಸೋಗಿನಲ್ಲಿ ಹೊಟೆಲ್‌ನಲ್ಲಿ ರೂಂ ಬುಕ್ ಮಾಡಿ, ಸೆಕ್ಸ್ ಎಂಜಾಯ್ ಮಾಡುತ್ತಿದ್ದರು.
ಪೊಲೀಸರು ಅಶ್ಲೀಲ ಸಿಡಿಗಳನ್ನು, ವಯಸ್ಕರ ಸಾಹಿತ್ಯವನ್ನು ಮತ್ತು ಕಾಂಡೋಮ್‌ಗಳನ್ನು ಹೊಟೆಲ್ ರೂಂಗಳಿಂದ ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ, ಗಿರಿಜಾ ಹೊಟೆಲ್ ಯುವ ದಂಪತಿಗೆ ಲೈಂಗಿಕ ಕೇಂದ್ರವಾಗಿತ್ತು. ಕೆಲವು ಸ್ಥಳೀಯರು ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು ದಾಳಿ ನಡೆಸಿದರು.