Select Your Language

Notifications

webdunia
webdunia
webdunia
webdunia

ಪ್ರೀತಿಸಲು ನಿರಾಕರಿಸಿದ ಯುವತಿಗೆ ಯುವಕ ಮಾಡಿದ್ದೇನು ಗೊತ್ತಾ?

Young woman
delhi , ಶುಕ್ರವಾರ, 17 ನವೆಂಬರ್ 2023 (11:02 IST)
ಕಾಲೇಜು ವಿದ್ಯಾರ್ಥಿನಿಯಾಗಿದ್ದ ಯುವತಿಯೊಬ್ಬಳು ದೀಪಾವಳಿ ಹಬ್ಬಕ್ಕಾಗಿ ಗ್ರಾಮಕ್ಕೆ ತೆರಳುತ್ತಿದ್ದಳು ಎನ್ನಲಾಗಿದೆ. ಆರೋಪಿ ಯುವಕ, ಗ್ರಾಮವೊಂದರ ಬಳಿ ಬಸ್ ನಿಲ್ಲಿಸಲು ಒತ್ತಾಯಿಸಿ, ಬಸ್‌ನೊಳಗೆ ಪೆಟ್ರೋಲ್ ಸುರಿದು ಬಸ್‌ಗೆ ಬೆಂಕಿ ಹಚ್ಚುವ ಬೆದರಿಕೆಯೊಡ್ಡಿದಾಗ ಗಾಬರಿಗೊಂಡ ಪ್ರಯಾಣಿಕರು ಬಸ್‌‌ನಿಂದ ಇಳಿದಿದ್ದಾರೆ.  ಬಸ್‌ನಲ್ಲಿ ಏಕಾಂಗಿಯಾಗಿದ್ದ ಯುವತಿಯ ಮೇಲೆ ಚಾಕುನಿಂದ ಹತ್ಯೆಗೈದು ಪರಾರಿಯಾಗಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
 
ಆಘಾತಕಾರಿ ಘಟನೆಯೊಂದರಲ್ಲಿ  ವ್ಯಕ್ತಿಯೊಬ್ಬ ಬಸ್‌ನಲ್ಲಿದ್ದ ಬಾಲಕಿಯನ್ನು ಎಳೆದುಕೊಂಡು ಹೋಗಿ ಚಾಕುವಿನಿಂದ ಮನಬಂದಂತೆ ತಿವಿದು ಹತ್ಯೆ ಮಾಡಿದ ಭೀಕರ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಆರೋಪಿಯಿಂದ ಬಾಲಕಿಯನ್ನು ಉಳಿಸಲು ಬಸ್ ಚಾಲಕ ಪ್ರಯತ್ನಿಸಿದನಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ, ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. 
 
ಯುವತಿಯನ್ನು ಬಸ್‌ನಿಂದ ಒತ್ತಾಯಪೂರ್ವಕವಾಗಿ ಕೆಳಗಿಳಿಸಿ ನಂತರ ಚಾಕುವನಿಂದ ಮನಬಂದಂತೆ ತಿವಿದಿದ್ದಾನೆ. ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈದೇ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ್ದ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.  
 
ಆರೋಪಿ, ಯುವತಿಯನ್ನು ಪ್ರೀತಿಸುತ್ತಿದ್ದನು ಎನ್ನಲಾಗಿದೆ. ಆದರೆ, ಯುವತಿ ಆತನನ್ನು ಪ್ರೀತಿಸುತ್ತಿರಲಿಲ್ಲವಾದ್ದರಿಂದ ಹತ್ಯೆ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕೇ ತಿಂಗಳಲ್ಲಿ ಪತಿಗೆ ಕೈಕೊಟ್ಟು ಪರಾರಿಯಾದ ಪತ್ನಿ