Select Your Language

Notifications

webdunia
webdunia
webdunia
webdunia

ಯುವತಿಯನ್ನು ಅಪಹರಿಸುವ ಸಂಚು ವಿಫಲಗೊಳಿಸಿದ ಯುವತಿ

ಯುವತಿಯನ್ನು ಅಪಹರಿಸುವ ಸಂಚು ವಿಫಲಗೊಳಿಸಿದ ಯುವತಿ
bangalore , ಮಂಗಳವಾರ, 14 ನವೆಂಬರ್ 2023 (17:03 IST)
ಯುವತಿ ಮತ್ತು ಆಕೆಯ ಸ್ನೇಹಿತೆಯನ್ನು ಅಪಹರಿಸುವ ಆರೋಪಿಗಳ ಕೃತ್ಯದ ಎಲ್ಲಾ ಘಟನೆ ಕ್ಯಾಮರಾದಲ್ಲಿ ಚಿತ್ರೀಕರಣಗೊಂಡಿದೆ. ಹಾಡಹಗಲೇ ಯುವತಿಯನ್ನು ಅಪಹರಿಸುವ ಆರೋಪಿಗಳ ಕೃತ್ಯದಿಂದ ನಗರದ ಜನತೆ ಬೆಚ್ಚಿಬಿದ್ದಾರೆ ಎನ್ನಲಾಗಿದೆ.  
 
ಯುವತಿಯೋರ್ವಳಿಗೆ ಕಿರುಕುಳ ನೀಡಿದ ಯುವಕನೊಬ್ಬ ಹಾಡುಹಗಲೇ ಆಕೆಯನ್ನು ಅಪಹರಿಸಲು ಪ್ರಯತ್ನಿಸಿದಾಗ ಆಕೆ ಆರೋಪಿಯ ವಿರುದ್ಧ ಹೋರಾಡಿ ಗೂಸಾ ನೀಡಿ ತಪ್ಪಿಸಿಕೊಂಡ ಘಟನೆ ನೊಯ್ಡಾದಲ್ಲಿ ಮಧ್ಯಾಹ್ನ ವರದಿಯಾಗಿದೆ. ಆಕೆ ಮತ್ತು ಆಕೆಯ ಸ್ನೇಹಿತೆ ಆತನಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಈ  ಘಟನೆ ನಡೆಯುವಾಗ ಸ್ಥಳದಲ್ಲಿ ಪೊಲೀಸರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು .ಈ ಕುರಿತು ಅವರಲ್ಲಿ ಪ್ರಶ್ನಿಸಿದಾಗ ಅವರು ಬೇಜವಾಬ್ದಾರಿಯುತವಾಗಿ ಕ್ಷಮೆ ಕೇಳಿರುವುದು ಅದಕ್ಷ ಪೊಲೀಸರ ವರ್ತನೆ ಬಗ್ಗ ಜನತೆಯಲ್ಲಿ ಅಸಹ್ಯ ಮೂಡಿಸಿದೆ.
 
ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪೊಲೀಸರು ತಮ್ಮ ಪಿಸಿಆರ್ ವಾಹನದ ಪೆಟ್ರೋಲ್ ಖಾಲಿಯಾದ ಕತೆ ಕಟ್ಟುತ್ತಾರೆ. ಆ ಕಾರಣಕ್ಕಾಗಿ ತಮಗೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಲಾಗಲಿಲ್ಲವೆಂದು ಪೊಲೀಸರು ಅರ್ಥಹೀನ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಕುಮಾರಸ್ವಾಮಿ ನಿವಾಸಕ್ಕೆ ಬೆಸ್ಕಾಂ ಅಧಿಕಾರಿಗಳು ಭೇಟಿ