Select Your Language

Notifications

webdunia
webdunia
webdunia
webdunia

ಹಾಡಗಲೇ ಅತ್ಯಾಚಾರಗೈದು ಹತ್ಯೆ : ಆರೋಪಿ ಬಂಧನ

ಹಾಡಗಲೇ ಅತ್ಯಾಚಾರಗೈದು ಹತ್ಯೆ : ಆರೋಪಿ ಬಂಧನ
gujarat , ಬುಧವಾರ, 15 ನವೆಂಬರ್ 2023 (10:15 IST)
ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಶಾಲೆಯಿಂದ ಬರಲಿದ್ದ ತನ್ನ ಮಕ್ಕಳನ್ನು ಕರೆದೊಯ್ಯಲು ರಸ್ತೆ ಬದಿಯಲ್ಲಿ ನಿಂತಿದ್ದರು. ಆ  ಸಮಯದಲ್ಲಿ ಅಲ್ಲಿಗೆ ಬಂದ ಆರೋಪಿ ಹರೀಶ್(18) ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪೀಡಿತೆಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 
 
ಶಿಕ್ಷಕಿ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿ ಆಕೆಯ ಸಾವಿಗೆ ಕಾರಣನಾಗಿದ್ದ  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.  ಗುಜರಾತ್‌ನ ವಡೋದರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬೇರೆಯವನೊಂದಿಗೆ ಓಡಿ ಹೋದ ಮಹಿಳೆಗೆ ಪತಿ ಮಾಡಿದ್ದೇನು ಗೊತ್ತಾ?