Publish Date: Tue, 14 Nov 2023 (18:06 IST)
Updated Date: Tue, 14 Nov 2023 (19:08 IST)
ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ ಎಸಗಿದ ಘಟನೆ ಬಿಹಾರದ ರಾಜಧಾನಿ ಪಾಟ್ಣಾದ ಭೋಜ್ಪುರ್ ಜಿಲ್ಲೆಯ ಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದ್ದು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ. ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಪಿಸ್ತೂಲು ತೋರಿಸಿ ಐದು ಜನ ಮಹಿಳೆಯರ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಬಿಹಾರದ ಭೋಜ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ದುಮರಿಯಾ ಗ್ರಾಮದ ನಿವಾಸಿಗಳಾದ ಎಲ್ಲ ಪೀಡಿತರು ಚಿಂದಿ ಆಯುವವರಾಗಿದ್ದು ತಾವು ಸಂಗ್ರಹಿಸಿದ್ದನ್ನು ವ್ಯಾಪಾರಿಗಳಿಗೆ ಮಾರಲು ಬುಧವಾರ ಸಂಜೆ ಕುರ್ಮಾರಿ ಎಂಬ ಗ್ರಾಮಕ್ಕೆ ಹೋಗಿದ್ದರು. ಮರಳುವಾಗ ರಾತ್ರಿಯಾಗಿದ್ದರಿಂದ ಅವರೆಲ್ಲರೂ ಅಲ್ಲಿಯೇ ಇರಲು ನಿರ್ಧರಿಸಿದರು ಎಂದು ಪೋಲಿಸರು ಹೇಳಿದ್ದಾರೆ.
ರಾತ್ರಿ ಸಮಯದಲ್ಲಿ ಅವರಿಗೆ ಎದುರಾದ ಮೂವರು ಪುರುಷರು ಪಿಸ್ತೂಲು ತೋರಿಸಿ ಅವರನ್ನು ಬೆದರಿಸಿ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು, ಕಟ್ಟಿ ಹಾಕಿದರು ಮತ್ತು ಮದ್ಯ ಕುಡಿಯಲು ಒತ್ತಾಯ ಮಾಡಿದರು. ತದ ನಂತರ ಸಾಮೂಹಿಕ ಅತ್ಯಾಚಾರ ನಡೆಸಿದರು. ಆ ಸಮಯದಲ್ಲಿ ಆರೋಪಿಗಳ ಸಹಚರರು ( 4 ರಿಂದ 5 ಜನ) ಹೊರಗೆ ಕಾವಲಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.
ಘಟನೆಯನ್ನು ವಿರೋಧಿಸಿ 100 ಕ್ಕೂ ಹೆಚ್ಚು ಜನರು ಶುಕ್ರವಾರ ಬೆಳಿಗ್ಗೆ ಫತೇಪುರ್- ಸಿಕರ್ತಾ ರಸ್ತೆ ತಡೆದು ಪ್ರತಿಭಟನೆ ನಡೆಸಿದರು ಮತ್ತು ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು. ಪೀಡಿತಳಲ್ಲಿ ಒಬ್ಬಳು ಗುರುವಾರ ಪೋಲಿಸರನ್ನು ಭೇಟಿಯಾಗಿ ಘಟನೆಯ ಕುರಿತು ದೂರು ನೀಡಿದ್ದಳು ಎಂದು ತಿಳಿಸಿದ್ದಾರೆ.