Select Your Language

Notifications

webdunia
webdunia
webdunia
webdunia

ಬೇರೆಯವನೊಂದಿಗೆ ಓಡಿ ಹೋದ ಮಹಿಳೆಗೆ ಪತಿ ಮಾಡಿದ್ದೇನು ಗೊತ್ತಾ?

ಬೇರೆಯವನೊಂದಿಗೆ ಓಡಿ ಹೋದ ಮಹಿಳೆಗೆ ಪತಿ ಮಾಡಿದ್ದೇನು ಗೊತ್ತಾ?
madhya pradesh , ಬುಧವಾರ, 15 ನವೆಂಬರ್ 2023 (09:45 IST)
24 ವರ್ಷದ ಬುಡಕಟ್ಟು ಜನಾಂಗದ ಯುವತಿಗೆ ಕಳೆದ ಕೆಲ ದಿನಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ಸ್ವಲ್ಪ ದಿನದಲ್ಲೇ ಆಕೆಗೆ ಬೇರೊಬ್ಬನ ಮೇಲೆ ಪ್ರೀತಿಯಾಗಿದೆ. ಇಬ್ಬರು ಪರಷ್ಪರ ಪ್ರೇಮದ ಬಲೆಯಲ್ಲಿ ಸಿಲುಕಿ ಗ್ರಾಮದಿಂದ ಪರಾರಿಯಾಗಿದ್ದಾರೆ. 
 
ನವವಿವಾಹಿತ ಯುವತಿಯೋರ್ವಳು ತಾನು ಪ್ರೀತಿಸಿದವನ ಜತೆ ಓಡಿ ಹೋದಕ್ಕೆ ಕೋಪಗೊಂಡ ಗ್ರಾಮಸ್ಥರು ಆಕೆಯನ್ನು ಹಿಡಿದು ತಂದು ಬೆತ್ತಲೆ ಮೆರವಣಿಗೆ ಮಾಡಿಸಿದ ಹೇಯ, ಖಂಡನೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 
 
ಮಹಿಳೆ ಪೋಷಕರು ಮತ್ತು ಪತಿಯ ಮನೆಯವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದು, ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆ ಆಕೆ ಹತ್ತಿರದ ಗ್ರಾಮವೊಂದರಲ್ಲಿ ಪ್ರೇಮಿಯೊಂದಿಗೆ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಎಳೆದುತಂದ ಗ್ರಾಮಸ್ಥರು ಪ್ರೇಮಿ ಮತ್ತು ಆಕೆಯನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಇದರಲ್ಲಿ ಆಕೆಯ ಗಂಡ ಕೂಡ ಭಾಗಿಯಾಗಿದ್ದಾನೆ.
 
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ನಿಧನ