Publish Date: Wed, 15 Nov 2023 (09:20 IST)
Updated Date: Wed, 15 Nov 2023 (09:20 IST)
ನವದೆಹಲಿ: ಒಂದು ಕಾಲದಲ್ಲಿ ಟೀಂ ಇಂಡಿಯಾ ಸೇರಿದಂತೆ ಭಾರತೀಯ ಕ್ರೀಡಾಳುಗಳ ಸಮವಸ್ತ್ರಗಳಿಗೆ ಪ್ರಮುಖ ಸ್ಪಾನ್ಸರ್ ಆಗಿದ್ದ ಸುಬ್ರತಾ ರಾಯ್ ನಿಧನರಾಗಿದ್ದಾರೆ.
ಬಹು ದಿನಗಳ ಅನಾರೋಗ್ಯದಿಂದ ಬಳಲುತ್ತಿರುವ ಸುಬ್ರತಾ ರಾಯ್ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ನವಂಬರ್ 12 ರಂದು ಅವರು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು.
ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮಗೆ ಕ್ಯಾನ್ಸರ್ ಎಂದು ತಿಳಿದಾಗ ಜೊತೆ ನಿಂತು ಧೈರ್ಯ ಹೇಳಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಸಹಾರಾ ಗ್ರೂಪ್ ನ ಸಂಸ್ಥಾಪಕ ಮುಖ್ಯಸ್ಥರಾಗಿದ್ದ ಅವರು ಉದ್ದಿಮೆ ವಲಯದಲ್ಲಿ ತಮ್ಮದೇ ಹೆಸರು ಮಾಢಿದ್ದರು.