Select Your Language

Notifications

webdunia
webdunia
webdunia
webdunia

ಹಾವು ಓಡಿಸಲು ಹಾಕಿದ ಹೊಗೆ ಮನೆಯನ್ನೇ ಸುಟ್ಟಿತು!

ಹಾವು ಓಡಿಸಲು ಹಾಕಿದ ಹೊಗೆ ಮನೆಯನ್ನೇ ಸುಟ್ಟಿತು!
ಲಕ್ನೋ , ಸೋಮವಾರ, 30 ಅಕ್ಟೋಬರ್ 2023 (09:40 IST)
ಲಕ್ನೋ: ಮನೆಗೆ ನುಗ್ಗಿದ ಹಾವು ಓಡಿಸಲು ಹೊಗೆ ಹಾಕಲು ಹೋದ ಕುಟುಂಬವೊಂದು ಮನೆಯನ್ನೇ ಸುಟ್ಟುಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮನೆಯೊಳಗೆ ಕಾಳಿಂಗ ಸರ್ಪವೊಂದು ಹೋಗಿದ್ದು ನೋಡಿ ಗಾಬರಿಗೊಂಡ ಮನೆಯವರು ಬೆರಣಿಗೆ ಬೆಂಕಿ ಹಾಕಿ ಹೊಗೆ ಹಾಕಿದ್ದರು. ಹೊಗೆ ತಾಕಿದರೆ ಹಾವು ಓಡಬಹುದು ಎಂಬ ಯೋಜನೆ ಅವರದ್ದಾಗಿತ್ತು.

ಆದರೆ ದುರಾದೃಷ್ಟವಶಾತ್ ಹಾವಿಗೆ ಹೊಗೆ ಹಾಕಲು ಹಚ್ಚಿದ್ದ ಬೆಂಕಿ ಮನೆಯನ್ನೇ ಸುಟ್ಟಿದೆ. ಕ್ಷಣಮಾತ್ರದಲ್ಲಿ ಜೀವಮಾನ ಪರ್ಯಂತ ಮಾಡಿದ್ದ ಲಕ್ಷಾಂತರ ರೂಪಾಯಿ ಹಣ, ಆಭರಣ ಎಲ್ಲವೂ ಸುಟ್ಟು ಭಸ್ಮವಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿನಸಿ ನೀಡಲು ಬಂದಿದ್ದವ ಮಹಿಳೆಯ ಮಾನಕ್ಕೇ ಕನ್ನ ಹಾಕಿದ