ನವದೆಹಲಿ: ನೇಪಾಳದ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲಾಗಿದೆ.
ಇಂದು ಬೆಳಿಗ್ಗೆ 7.39 ಕ್ಕೆ ಭೂಕಂಪನವಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವುಗಳಾಗಿಲ್ಲ ಎಂದು ವರದಿಯಾಗಿದೆ. ಟಿಬೆಟ್ ಹಾಗೂ ಭಾರತೀಯ ಟೆಕ್ಟೋನಿಕ್ ಪ್ಲೇಟ್ ಗಳು ಸಂಧಿಸುವ ಸ್ಥಳದಲ್ಲಿ ಘರ್ಷಣೆಯಾಗಿದೆ.
ನೇಪಾಳ ಜಗತ್ತಿನ ಅತ್ಯಂತ ಹೆಚ್ಚು ಭೂಕಂಪ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. 2015 ರಲ್ಲಿ ಇಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿರಾರು ಜನ ಸಾವನ್ನಪ್ಪಿದ್ದರು.