ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇದು ನಿಜವಲ್ಲ ಎಂದು ಸ್ಪಷ್ಟನೆಯೂ ಬಂದಿದೆ.
71 ವರ್ಷದ ಪುಟಿನ್ ಅವರು ಹೃದತ ಸಂಬಂಧೀ ಖಾಯಿಲೆಯಿಂದ ಬಳಲುತ್ತಿದ್ದಾರೆ, ಅವರು ಹೃದಯಸ್ತಂಬನಕ್ಕೊಳಗಾಗಿದ್ದಾರೆ ಎಂದು ಸುದ್ದಿ ಹಬ್ಬಿತ್ತು.
ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಬಂದಿದ್ದು, ಪುಟಿನ್ ಹೃದಯಸ್ತಂಬನಕ್ಕೊಳಗಾಗಿದ್ದ ವರದಿಗಳೆಲ್ಲಾ ಸುಳ್ಳು. ಅವರು ಫಿಟ್ ಆಗಿದ್ದಾರೆ ಎಂದು ವರದಿ ಬಂದಿದೆ.