Select Your Language

Notifications

webdunia
webdunia
webdunia
Saturday, 5 April 2025
webdunia

ಇನ್ಮುಂದೆ ರಷ್ಯಾದಲ್ಲಿ ಗಂಡು ಹೆಣ್ಣಾಗಿ ಹೆಣ್ಣು ಗಂಡಾಗಿ ಬದಲಾಗುವಂತಿಲ್ಲ!

ವ್ಲಾಡಿಮಿರ್ ಪುಟಿನ್
ಮಾಸ್ಕೋ , ಗುರುವಾರ, 27 ಜುಲೈ 2023 (06:11 IST)
ಮಾಸ್ಕೋ : ರಷ್ಯಾ ದೇಶದಲ್ಲಿ ಲಿಂಗ ಪರಿವರ್ತನೆಗೆ ಶಸ್ತ್ರಚಿಕಿತ್ಸೆ ಮಾಡಿಸುವುದನ್ನು ನಿಷೇಧಿಸುವ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹಿ ಹಾಕಿದ್ದಾರೆ.

ಲಿಂಗ ಪರಿವರ್ತನೆಗೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆಗಳನ್ನು ಕಾನೂನುಬಾಹಿರಗೊಳಿಸುವ ಕಾನೂನಿಗೆ ಇದು ಪೂರಕವಾಗಿದೆ. ಮಕ್ಕಳ ಅಸಮರ್ಪಕ ಬೆಳವಣಿಗೆ ಮತ್ತು ಜನ್ಮ ದೋಷಗಳನ್ನು ಪರಿಹರಿಸಲು ಬಳಸುವ ವೈದ್ಯಕೀಯ ವಿಧಾನಗಳಿಗೆ ನಿರ್ಬಂಧವು ಅನ್ವಯಿಸುವುದಿಲ್ಲ. ಹಾಗೆಯೇ ಲೈಂಗಿಕ ವ್ಯತ್ಯಾಸದ ಬಾಲ್ಯದ ಅಸ್ವಸ್ಥತೆಗಳಿಗೆ ಸಂಬಂಧಿಸಿದ ಆನುವಂಶಿಕ ಮತ್ತು ಅಂತಃಸ್ರಾವಕ ಸಮಸ್ಯೆಗಳಿಗೆ ಅನ್ವಯಿಸುವುದಿಲ್ಲ ಎಂದು ರಷ್ಯಾದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. 

ಕಾನೂನಿನ ಮುಖ್ಯ ಗುರಿಯು, ರಷ್ಯಾ ಸಮಾಜದ ಸಾಂವಿಧಾನಿಕ ನೈತಿಕ ತತ್ವಗಳು ಮತ್ತು ಕೌಟುಂಬಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು. ದೇಶದ ಜನರ ಆರೋಗ್ಯವನ್ನು, ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯವನ್ನು ಕಾಪಾಡುವುದಾಗಿದೆ ಎನ್ನಲಾಗಿದೆ.

ಈ ಕಾನೂನು ಅಂಗೀಕಾರವಾದ ದಿನದಿಂದಲೇ ಜಾರಿಗೆ ಬರುತ್ತದೆ. ಈಗಾಗಲೇ ಲಿಂಗ ಬದಲಾಯಿಸಿಕೊಂಡಿರುವವರಿಗೆ ಈ ಕಾನೂನು ಅನ್ವಯವಾಗುವುದಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಲದ ಜೊತೆ ಜೊತೆಗೆ ರೇನ್ ಕೋಟ್,ಟೋಪಿಗಳಿಗೆ ಡಿಮ್ಯಾಂಡ್