Select Your Language

Notifications

webdunia
webdunia
webdunia
webdunia

ಪಟಾಕಿ ಹಚ್ಚುವ ವಿಚಾರದಲ್ಲಿ ಗಲಾಟೆ: ಅಪ್ಪ, ಮಗನ ಕೊಲೆ

ಪಟಾಕಿ ಹಚ್ಚುವ ವಿಚಾರದಲ್ಲಿ ಗಲಾಟೆ: ಅಪ್ಪ, ಮಗನ ಕೊಲೆ
ವಾರಣಾಸಿ , ಮಂಗಳವಾರ, 14 ನವೆಂಬರ್ 2023 (12:01 IST)
ವಾರಣಾಸಿ: ದೀಪಾವಳಿಗೆ ಪಟಾಕಿ ಹಚ್ಚುವ  ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ತಂದೆ-ಮಗ ಕೊಲೆಯಾದ ಘಟನೆ ವಾರಣಾಸಿಯಲ್ಲಿ ನಡೆದಿದೆ.

ಮಕ್ಕಳು ಪಟಾಕಿ ಹಚ್ಚುತ್ತಿದ್ದಾಗ ನಾಲ್ವರು ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ತಡೆಯಲು ಬಂದಿದ್ದಾರೆ. ಈ ವೇಳೆ ಮಕ್ಕಳ ರಕ್ಷಣೆಗೆ ತಂದೆ ಬಂದಿದ್ದಾರೆ. ಆಗ ತಂದೆ, ಮಗನ ಮೇಲೆ ನಾಲ್ವರು ಹಲ್ಲೆ ನಡೆಸಿದ್ದು, ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಕೊಲೆಗೀಡಾದ ವ್ಯಕ್ತಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯಲ್ಲಿ ಮೃತರ ಸಂಬಂಧಿಕರಿಗೂ ಗಾಯಗಳಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಪಟಾಕಿಗೆ ಗಾಯಗೊಂಡವರ ಸಂಖ್ಯೆ 40 ಕ್ಕೂ ಹೆಚ್ಚು