Publish Date: Thu, 09 Nov 2023 (12:15 IST)
Updated Date: Thu, 09 Nov 2023 (12:17 IST)
ಅತ್ಯಾಚಾರಕ್ಕೆ ಪ್ರಯತ್ನಿಸುತ್ತಿದ್ದ ಕಾಮುಕರ ಮುಂದೆ ಬಾಲಕಿಯರು ಸಮಯಪ್ರಜ್ಞೆ ತೋರಿಸಿ ಕಿರುಚಿಕೊಂಡಿದ್ದರಿಂದ ಆಗಬಹುದಾಗಿದ್ದ ಭಾರಿ ಗಂಡಾಂತರ ತಪ್ಪಿದೆ. ಈ ಘಟನೆ ಬಗ್ಗೆ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಶಾಲೆಯ ಸುತ್ತಲೂ ಸರಿಯಾದ ಕಾಂಪೌಂಡ್ ಹಾಕಿಲ್ಲವೆಂದು ದೂರಿದ್ದಾರೆ.
ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಇಬ್ಬರು ವಿದ್ಯಾರ್ಥಿನಿಯರ ಮೇಲೆ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸಂಭವಿಸಿದೆ. ಪಂಜಾಬ್‌ನ ಚಂಡೀಗಡ್ ನಗರದ ಶಾಲೆಯ ಬಳಿ ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದಾಗ ಬಾಲಕಿಯರು ಅದಕ್ಕೆ ಪ್ರತಿರೋಧಿಸಿದಾಗ ಬ್ಲೇಡ್‌ನಿಂದ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದರು.
ಬಾಲಕಿಯರು ಕಿರುಚಿಕೊಂಡಾಗ ಸ್ಥಳೀಯರು ಬಾಲಕಿಯರನ್ನು ರಕ್ಷಿಸಿದ್ದು, ದುಷ್ಕರ್ಮಿಗಳು ತಪ್ಪಿಸಿಕೊಂಡು ಹೋಗಿದ್ದಾರೆ. ಚಿಕಿತ್ಸೆಗಾಗಿ ಬಾಲಕಿಯರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ನಾಲ್ವರು ಕಾಮುಕರ ಮುಖಚಹರೆಯನ್ನು ಬಾಲಕಿಯರು ನೀಡಿದ್ದು, ಪೊಲೀಸರು ಅವರಿಗಾಗಿ ಶೋಧ ನಡೆಸಿದ್ದಾರೆ.