Select Your Language

Notifications

webdunia
webdunia
webdunia
webdunia

ಯುವತಿಯ ಮೇಲೆ ಗ್ಯಾಂಗ್‌ರೇಪ್: 13 ಆರೋಪಿಗಳಿಗೆ 20 ವರ್ಷ ಶಿಕ್ಷೆ

ಯುವತಿಯ ಮೇಲೆ ಗ್ಯಾಂಗ್‌ರೇಪ್: 13 ಆರೋಪಿಗಳಿಗೆ 20 ವರ್ಷ ಶಿಕ್ಷೆ
delhi , ಗುರುವಾರ, 9 ನವೆಂಬರ್ 2023 (08:15 IST)
ಬೇರೆ ಕೋಮಿನ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವತಿಗೆ ಸಾಮೂಹಿಕ ಅತ್ಯಾಚಾರದ ಶಿಕ್ಷೆ ನೀಡಬೇಕೆಂದು ಆದೇಶ ನೀಡಿತ್ತು. ಕಳೆದ ಜನವರಿ 21ರಂದು 20 ವರ್ಷ ವಯಸ್ಸಿನ ಯುವತಿಯನ್ನು ಮತ್ತು ಅವಳ ಜೊತೆಯಿದ್ದ ಪುರುಷನನ್ನು ಮರಕ್ಕೆ ಕಟ್ಟಿಹಾಕಿ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ತಲಾ 25,000 ದಂಡ ಕಟ್ಟುವಂತೆ ಗ್ರಾಮದ ಹಿರಿಯರು ಆದೇಶ ನೀಡಿದರು. 
 
ಬೀರ್‌ಭುಮ್ ಜಿಲ್ಲೆಯ ಲಾಭಪುರ ಗ್ರಾಮದಲ್ಲಿ ಬುಡಕಟ್ಟು ಯುವತಿಯೊಬ್ಬಳ ಮೇಲೆ ಅಮಾನುಷವಾಗಿ ನಡೆದ ಗ್ಯಾಂಗ್‌ ರೇಪ್‌ಗೆ ಸಂಬಂಧಿಸಿದಂತೆ ಪಶ್ಚಿಮಬಂಗಾಳದ ಕೋರ್ಟೊಂದು 13 ಜನರಿಗೆ 20 ವರ್ಷಗಳ ಸೆರೆವಾಸ ಶಿಕ್ಷೆಯನ್ನು ವಿಧಿಸಿದೆ. 
 
ಆಗ ಮಹಿಳೆಯ ಕುಟುಂಬ ತಮಗೆ ಅಷ್ಟೊಂದು ದಂಡ ಕಟ್ಟಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿತು.ಆಗ ಯುವತಿಯನ್ನು ಬಲವಂತವಾಗಿ ಸಣ್ಣ ಗುಡಿಸಿಲಿನೊಳಕ್ಕೆ ತಳ್ಳಿದರು ಮತ್ತು ಅಲ್ಲಿ ಸುಮಾರು 10 ಜನರು ಯುವತಿಯ ಮೇಲೆ ಮನ ಬಂದಂತೆ ಅತ್ಯಾಚಾರ ನಡೆಸಿದರು.ನನ್ನನ್ನು ಗ್ರಾಮದ ಪುರುಷರು ಅನುಭವಿಸಬೇಕೆಂದು ಗ್ರಾಮದ ಮುಖಂಡ ಆದೇಶ ನೀಡಿದ ಬಳಿಕ ಕನಿಷ್ಟ 10-12 ಮಂದಿ ನನ್ನ ಮೇಲೆ ಸತತವಾಗಿ ಅತ್ಯಾಚಾರ ಮಾಡಿದರು. ನನ್ನ ಮೇಲೆ ಎಷ್ಟು ಬಾರಿ ಅತ್ಯಾಚಾರ ಮಾಡಿದರೆಂದು ಲೆಕ್ಕವೂ ತಪ್ಪಿಹೋಯಿತು ಎಂದು ಯುವತಿ ಪೊಲೀಸರಿಗೆ ದೂರಿದ್ದಾಳೆ.
 
ಪ್ರಥಮ ಮಾಹಿತಿ ವರದಿಯಲ್ಲಿ ಅವಳು 13 ಜನರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಹೆಸರಿಸಿದ್ದಳು. ಈ ಆಘಾತಕಾರಿ ಪ್ರಕರಣವನ್ನು ಅತ್ಯಂತ ಖಂಡನೀಯ ಎಂದು ಹೇಳಿದ ಕೋರ್ಟ್, ಯುವತಿ ವಾಸಿಸುವ ಬೀರ್‌ಭುಮ್ ಗ್ರಾಮಕ್ಕೆ ಭೇಟಿ ನೀಡಿ ಸತ್ಯಾಂಶಗಳ ಬಗ್ಗೆ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾ ನ್ಯಾಯಾಧೀಶರಿಗೆ ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಬಾಲಕಿಯ ಮೇಲೆ ರೇಪ್: ಆರೋಪಿ ಬಂಧನ