Publish Date: Wed, 08 Nov 2023 (11:30 IST)
Updated Date: Wed, 08 Nov 2023 (11:32 IST)
ಯುವತಿಗೆ ತಂದೆ ಬಯ್ದರು ಎಂಬ ಕಾರಣಕ್ಕೆ ತಾತನ ಮನೆಗೆ ಹೊರಟಿದ್ದ ಆ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಸುರೇಶ್ ಮತ್ತು ರಾಜು ಯುವತಿಗೆ ಡ್ರಾಪ್ ಕೊಡುವ ನೆಪದಲ್ಲಿ ರಾತ್ರಿವೇಳೆ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ.
ಕಾಮುಕರು ಅಪ್ರಾಪ್ತೆಯನ್ನು ಕಾರಿನಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ದೆಹಲಿಯ ಹತ್ತಿರದಲ್ಲಿರುವ ಗುರ್ಗಾಂವ್‌ನಲ್ಲಿ ನಡೆದಿದೆ. ಆರೋಪಿಗಳು ಯುವತಿಯನ್ನು ಕರೆದುಕೊಂಡು ಹೋಗಿದ್ದ ಕಾರ್ ಮಾತ್ರ ಪತ್ತೆಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಸುರೇಶ್ ಮತ್ತು ರಾಜು ಎಂಬವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಮತ್ತೊಂದು ಹೇಯ ಅತ್ಯಾಚಾರ ಪ್ರಕರಣ ವರದಿಯಾಗಿದೆ.