Publish Date: Thu, 09 Nov 2023 (08:44 IST)
Updated Date: Thu, 09 Nov 2023 (08:48 IST)
ಕೂಲಿಕಾರ್ಮಿಕರಾಗಿರುವ ಬಾಲಕಿಯ ಪಾಲಕರು ಕೆಲಸಕ್ಕೆ ಹೋದ ಸಂದರ್ಭದಲ್ಲಿ, ಮನೆಯಲ್ಲಿ ಏಕಾಂಗಿಯಾಗಿದ್ದ ಬಾಲಕಿಯ ಮೇಲೆ ಕಳೆದ ಮೂರು ತಿಂಗಳ ಹಿಂದೆ ಆತ ಪ್ರಥಮ ಬಾರಿ ಅತ್ಯಾಚಾರವೆಸಗಿದ್ದ. ತನ್ನ ಕುಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಆತ ಬಾಲಕಿಗೆ ಬೆದರಿಕೆ ಒಡ್ಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
13 ವರ್ಷದ ಬಾಲಕಿಯ ಮೇಲೆ 35 ವರ್ಷದ ವ್ಯಕ್ತಿಯೊಬ್ಬ ನಿರಂತರ ಮೂರು ತಿಂಗಳು ಅತ್ಯಾಚಾರ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ
ಗಣೇಶ್ ಘಾಮ್ ಕಾಲೋನಿಯ ನಿವಾಸಿಯಾಗಿರುವ ಪೀಡಿತಳ ಪರಿವಾರದವರು, ಬಾಣಗಂಗಾ ಪೋಲಿಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಆರೋಪಿ ರತನ್ ಮಾಲ್ವಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ತೋಮರ್ ತಿಳಿಸಿದ್ದಾರೆ.
ನಂತರ ಪದೇ ಪದೇ ಅನೇಕ ಬಾರಿ ಕೀಚಕತನವನ್ನಾತ ಪುನರಾರ್ವತಿಸಿದ್ದಾನೆ ಎಂದು ತೋಮರ್ ಹೇಳಿದ್ದಾರೆ. ಆರೋಪಿಯ ಪತ್ನಿ ಕಳೆದ ಎರಡು ವರ್ಷಗಳ ಹಿಂದೆ ಆತನನ್ನು ತ್ಯಜಿಸಿದ್ದಾಳೆ ಎಂದು ತಿಳಿದು ಬಂದಿದೆ.