Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿನಿಯ ಮೇಲೆ ಶಿಕ್ಷಕನ ಲೈಂಗಿಕ ದೌರ್ಜನ್ಯ ಸಿಸಿಟಿವಿ ಕ್ಯಾಮರಾದಲ್ಲಿ ಬಯಲು

ವಿದ್ಯಾರ್ಥಿನಿಯ ಮೇಲೆ ಶಿಕ್ಷಕನ ಲೈಂಗಿಕ ದೌರ್ಜನ್ಯ ಸಿಸಿಟಿವಿ ಕ್ಯಾಮರಾದಲ್ಲಿ ಬಯಲು
ಆಗ್ರಾ , ಶುಕ್ರವಾರ, 10 ನವೆಂಬರ್ 2023 (17:13 IST)
ಆಗ್ರಾ: ಹನ್ನೊಂದನೇ ತರಗತಿ ಓದುತ್ತಿದ್ದ ದಲಿತ ವಿದ್ಯಾರ್ಥಿನಿಯ ಮೇಲೆ ಕಾಮುಕ ಶಿಕ್ಷಕ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಮಧುರಾದ ಸರ್ಕಾರಿ ಕಾಲೇಜೊಂದರಲ್ಲಿ ನಡೆದಿದೆ.

ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. 51 ಸೆಕೆಂಡುಗಳ ವಿಡಿಯೋದಲ್ಲಿ ಶಿಕ್ಷಕ ವಿದ್ಯಾರ್ಥಿಯನ್ನು ಹಿಡಿದೆಳೆಯಲು ಪ್ರಯತ್ನಿಸುತ್ತಿರುವುದು ಮತ್ತು ಲೈಂಗಿಕವಾಗಿ ಪೀಡಿಸುತ್ತಿರುವುದು ದಾಖಲಾಗಿದೆ. ಘಟನೆ ಬಳಿಕ ಈ ವಿಚಾರವನ್ನು ಬಯಲು ಮಾಡಿದರೆ ಆಸಿಡ್ ದಾಳಿ ಮಾಡುವುದಾಗಿ ಶಿಕ್ಷಕ ಭಯಪಡಿಸಿದ್ದ  ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

ಶಿಕ್ಷಕನ ವಿರುದ್ಧ ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ತಲೆಮರೆಸಿಕೊಂಡಿರುವ ಶಿಕ್ಷಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ ಫ್ಯೂಸ್ ಆಗಿ ಮಾಲಿಕನನ್ನೇ ಕೊಂದ ರೋಬೋಟ್!