Select Your Language

Notifications

webdunia
webdunia
webdunia
webdunia

ಚಿಕಿತ್ಸೆಗೆಂದು ಬಂದವನನ್ನು ಹೊಡೆದು ಕೊಂದ ವೈದ್ಯರು!

ಚಿಕಿತ್ಸೆಗೆಂದು ಬಂದವನನ್ನು ಹೊಡೆದು ಕೊಂದ ವೈದ್ಯರು!
ಬಿಹಾರ , ಭಾನುವಾರ, 12 ನವೆಂಬರ್ 2023 (10:50 IST)
ಬಿಹಾರ: ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯನ್ನು ವೈದ್ಯರು ಮತ್ತು ಅವರ ಸಿಬ್ಬಂದಿಗಳು ಹೊಡೆದು ಕೊಲೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ!

ಗ್ಯಾಂಗ್ ಸ್ಟರ್ ಆಗಿದ್ದ ವ್ಯಕ್ತಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ. ಆದರೆ ಈ ವೇಳೆ ವೈದ್ಯರ ಜೊತೆಗೆ ವಾಗ್ವಾದಕ್ಕಿಳಿದಿದ್ದ. ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಗಿದ್ದು ಇದೇ ಭರದಲ್ಲಿ ವೈದ್ಯರು ಮತ್ತು ಅವರ ಸಿಬ್ಬಂದಿಗಳು ಹರಿತವಾದ ವಸ್ತುಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಗ್ಯಾಂಗ್ ಸ್ಟರ್ ನ ಅನುಯಾಯಿಗಳು ಆಸ್ಪತ್ರೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ಆದರೆ ಬಳಿಕ ಅವರನ್ನು ಬಂಧಿಸಲಾಗಿದೆ. ಜೊತೆಗೆ ವೈದ್ಯರನ್ನೂ ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಮೊದಲ ದಿನದ ವಿಶೇಷತೆಯೇನು?