Select Your Language

Notifications

webdunia
webdunia
webdunia
webdunia

ವಿಮಾನದಲ್ಲಿ ಮಹಿಳೆಯ ಖಾಸಗಿ ಅಂಗಾಂಗ ಸ್ಪರ್ಶಿಸಿದ ವ್ಯಕ್ಯಿಯ ಬಂಧನ

ವಿಮಾನದಲ್ಲಿ ಮಹಿಳೆಯ ಖಾಸಗಿ ಅಂಗಾಂಗ ಸ್ಪರ್ಶಿಸಿದ ವ್ಯಕ್ಯಿಯ ಬಂಧನ
ಬೆಂಗಳೂರು , ಗುರುವಾರ, 9 ನವೆಂಬರ್ 2023 (11:20 IST)
ಬೆಂಗಳೂರು: ವಿಮಾನ ಪ್ರಯಾಣ ವೇಳೆ ಪಕ್ಕದಲ್ಲಿ ಕೂತಿದ್ದ ಮಹಿಳೆಯ ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸಿ ಅಸಭ್ಯ ವರ್ತನೆ ತೋರಿದ ತಮಿಳುನಾಡು ಮೂಲದ ವ್ಯಕ್ತಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

50 ವರ್ಷದ ರಂಗನಾಥ್ ಬಂಧಿತ ವ್ಯಕ್ತಿ. ಅಮೆರಿಕಾದಲ್ಲಿ ಇಂಜಿನಿಯರ್ ವೃತ್ತಿಯಲ್ಲಿರುವ ಈತ ಅಮೆರಿಕಾದಿಂದ ಬೆಂಗಳೂರಿಗೆ ಬರುವಾಗ ವಿಮಾನದಲ್ಲಿ ಅಸಭ್ಯ ವರ್ತನೆ ತೋರಿದ್ದಾನೆ. ಪಕ್ಕದಲ್ಲಿ ಕೂತಿದ್ದ ಮಹಿಳೆ ನಿದ್ರೆ ಮಾಡುತ್ತಿದ್ದಾಗ ಈತ ಅಶ್ಲೀಲ ವರ್ತನೆ ತೋರಿದ್ದಾನೆ. ಇದರಿಂದ ಎಚ್ಚರಗೊಂಡ ಆಕೆ ಆರೋಪಿಯನ್ನು ಪ್ರಶ್ನಿಸಿದ್ದಾರೆ.

ತಕ್ಷಣವೇ ವಿಮಾನ ಸಿಬ್ಬಂದಿಗೂ ದೂರು ನೀಡಿದ್ದಾರೆ. ಬಳಿಕ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಾಗ ಮಹಿಳೆ ನೀಡಿದ ದೂರಿನ ಆಧಾರದಂತೆ ಆತನನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಹತ್ಯೆಗೈದ ಗಂಡ