Select Your Language

Notifications

webdunia
webdunia
webdunia
webdunia

ಬಾಯ್ ಫ್ರೆಂಡ್‌ನೊಂದಿಗೆ ಓಡಿ ಹೋಗಿದ್ದ ಪುತ್ರಿಯ ಮೇಲೆ ತಂದೆಯಿದಲೇ ರೇಪ್

ಬಾಯ್ ಫ್ರೆಂಡ್‌ನೊಂದಿಗೆ  ಓಡಿ ಹೋಗಿದ್ದ ಪುತ್ರಿಯ ಮೇಲೆ ತಂದೆಯಿದಲೇ ರೇಪ್
ಉತ್ತರ ಪ್ರದೇಶ , ಶುಕ್ರವಾರ, 17 ನವೆಂಬರ್ 2023 (18:00 IST)
ಇಷ್ಟಕ್ಕೂ ಮಗಳು ಮಾಡಿದ ತಪ್ಪು ಏನು ಗೊತ್ತಾ? ಲವ್‌ ಮಾಡಿದ್ದು..! ಬಾಯ್ ಫ್ರೆಂಡ್ ಜತೆ ಮಗಳು ಓಡಿ ಹೋಗಿದ್ದಾಳೆ ಎಂದು ತಿಳಿದು ಸಿಟ್ಟಿಗೆದ್ದ ತಂದೆ ಆತನ ಗೆಳೆಯನ ಜೊತೆ ಸೇರಿ ಮಗಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾನೆ.
 
ಅವಳು 4 ತಿಂಗಳ ಗರ್ಭಿಣಿ. ಹೊಟ್ಟೆಯಲ್ಲಿ ಮಗುವೊಂದು ರೂಪ ತಾಳುತ್ತಿತ್ತು. ಹೀಗಿರುವಾಗ ತುಂಬು ಗರ್ಭಿಣಿಯಾಗಿರುವ ಸ್ವಂತ ಮಗಳ ಮೇಲೆಯೇ ತಂದೆಯ ಅತ್ಯಾಚಾರ ನಡೆಸಿದ್ದಾನೆ. ಅಷ್ಟೇ ಅಲ್ಲ, ತನ್ನ ಗೆಳೆಯನಿಂದಲೂ ಮಗಳ ಮೇಲೆ ಅತ್ಯಾಚಾರ ನಡೆಸಿ ವಿಕೃತವನ್ನು ಮೆರೆದಿದ್ದಾನೆ.
 
ತಂದೆ ಮತ್ತು ತಂದೆಯ ಸ್ನೇಹಿತನಿಂದ ಅತ್ಯಾಚಾರಕ್ಕೆ ಬಲಿಯಾದ 17 ವರ್ಷದ ನತದೃಷ್ಟ ಬಾಲಕಿ ಮೂಲತಃ ಉತ್ತರ ಪ್ರದೇಶದ ಗ್ರಾಮದವಳು. ನಾಲ್ಕು ತಿಂಗಳ ಹಿಂದೆ 19 ವರ್ಷದ ಬಾಯ್ ಫ್ರೆಂಡ್ ಜೊತೆ ಮುಂಬಯಿಗೆ ಓಡಿ ಹೋಗಿದ್ದಳು. ನಂತರ ದೇವಸ್ಥಾನದಲ್ಲಿ ಮದುವೆಯಾಗಿ ಭಯಂದರ್‌ನಲ್ಲಿ ಬದುಕು ಸಾಗಿಸುತ್ತಿದ್ದರು. ಆದ್ರೆ ಮಗಳು ಮನೆಬಿಟ್ಟು ಹೋಗಿದ್ದರಿಂದ ಆಕೆಯ ತಂದೆಗೆ ಕೋಪ ನೆತ್ತಿಗೇರಿತ್ತು. ಹೀಗಾಗಿ ಮಗಳ ಮೇಲೆ ಸೆಡು ತೀರಿಸಿಕೊಳ್ಳಲು ಆಕೆಗಾಗಿ ಹುಡುಕುತ್ತಿದ್ದ.
 
ಎರಡು ವಾರಗಳ ಹಿಂದೆಯಷ್ಟೇ ಮಗಳು ಇರುವ ಜಾಗ ಪತ್ತೆಯಾಗಿದೆ. ಈ ವೇಳೆ ತನ್ನ ಗೆಳೆಯನ ಜೊತೆ ಮಗಳ ಮನೆಗೆ ತೆರಳಿದ ಪಾಪಿ ತಂದೆ ಗದ್ದಲ ಎಬ್ಬಿಸಿದ್ದಾನೆ. ಆ ಸಂದರ್ಭದಲ್ಲಿ ಆಕೆಯ ಜೊತೆಗಿದ್ದ ಪತಿರಾಯ ಪರಾರಿಯಾಗಿಬಿಟ್ಟಿದ್ದಾನೆ. ಗಂಡನ ಮನೆಯಲ್ಲಿದ್ದ ಮಗಳನ್ನು ತನ್ನ ಗೆಳೆಯನ ಮನೆಗೆ ಕರೆತಂದು ''ಎಲ್ಲವನ್ನೂ ಮರೆತು, ಮನೆಗೆ ಮರಳಿ ಬಾ,'' ಎಂದು ಒತ್ತಾಯಿಸಿದ್ದಾನೆ. ಆದರೆ ಮಗಳು ಒಪ್ಪಲಿಲ್ಲ. ಇದರಿಂದ ರೊಚ್ಚಿಗೆದ್ದ ತಂದೆ, ತನ್ನ ಗೆಳೆಯನ ಜೊತೆ ಸೇರಿ ಕಾಡಿಗೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದರಿಂದ ತೃಪ್ತಗೊಳ್ಳದೇ, ''ಅವಳಿಗೆ ತಕ್ಕ ಪಾಠ ಕಲಿಸಬೇಕು. ನೀನೂ ಅತ್ಯಾಚಾರ ಮಾಡು,'' ಎಂದು ಗೆಳೆಯನ ಪ್ರಚೋದಿಸಿದ್ದಾನೆ.
 
ಆದ್ರೆ ನಂತರದಲ್ಲಿ ಈ ಸಾಮೂಹಿಕ ಅತ್ಯಾಚಾರದ ವಿಷಯವನ್ನು ಯಾರಿಗಾದರೂ ತಿಳಿಯಬಹುದು ಎಂದು ಅರಿತ ತಂದೆ ದುಪಟ್ಟಾದಿಂದ ಮಗಳ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ನಂತರ, ಶವವನ್ನು ಪೊದೆಗೆ ನೂಕಿ ಪರಾರಿಯಾದ ಘಟನೆ ವರದಿಯಾಗಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಪಕ್ಷ ನಾಯಕನ ಆಯ್ಕೆ, ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ