ಮನೆಯಲ್ಲಿ ಹಿರಿಯರು ಸಂಬಂಧಿಕರ ಮನೆಗೆ ತೆರಳಿದ್ದಾಗ ಬಾಲಕಿ ತನ್ನ ಇಬ್ಬರು ಅಪ್ರಾಪ್ತ ಸಹೋದರರೊಂದಿಗಿದ್ದಾಗ ಈ ಘಟನೆ ನಡೆದಿದೆ. ಆರೋಪಿ ನೆರೆಮನೆಯಲ್ಲಿ ಬಾಡಿಗೆಯಲ್ಲಿ ವಾಸಿಸುತ್ತಿದ್ದು ಬಾಲಕಿಯ ಮೇಲೆ ಅತ್ಯಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 
 			
 
 			
					
			        							
								
																	
	 
	ದೆಹಲಿಯ ಆಗ್ನೇಯ ಭಾಗದಲ್ಲಿರುವ ಸ್ವರೂಪ್ ನಗರ್ ಪ್ರದೇಶದಲ್ಲಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಆಕೆಯ ಸಹೋದರನನ್ನು ಹತ್ಯೆ ಮಾಡಿದ ಹೇಯ ಘಟನೆ ವರದಿಯಾಗಿದೆ. 
	 
	ಅತ್ಯಾಚಾರ ಘಟನೆ ನಡೆದಾಗ ಮನೆಯಲ್ಲಿ ಏಳು ವರ್ಷದ ಸಹೋದರ ಮಲಗಿದ್ದ. ನಂತರ ಆತನು ಎಚ್ಚರಗೊಂಡು ನೋಡಿದಾಗ ಸಹೋದರಿ ನೋವಿನಿಂದ ಅಳುತ್ತಿರುವುದನ್ನು ನೋಡಿ ಮನೆಯ ಮಾಲೀಕರಿಗೆ ಮಾಹಿತಿ ತಿಳಿಸಿದ್ದಾನೆ.
	 
	ಮನೆಯ ಮಾಲೀಕರು ಪೊಲೀಸರಿಗೆ ಕರೆ ಮಾಡಿ, ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಆಕೆಯ ಸಹೋದರನನ್ನು ಕತ್ತುಹಿಸಕಿ ಕೊಲೆಮಾಡಲಾಗಿದೆ ಎಂದು ತಿಳಿಸಿದ್ದಾರೆ.
	 
	ಪೊಲೀಸರು ಬಾಲಕಿಯ ಮನೆಗೆ ತೆರಳಿ ಪರಿಶೀಲಿಸಿ ಬಾಲಕಿ ಹಾಗೂ ಆಕೆಯ ಸಹೋದರನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
	 
	ಆರೋಪಿ  ಪರಾರಿಯಾಗಿದ್ದು ಆತನ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.