Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕಿಯ ಮೇಲೆ 3 ಶಿಕ್ಷಕರಿಂದ ಗ್ಯಾಂಗ್‌ರೇಪ್

Gangrape
delhi , ಗುರುವಾರ, 23 ನವೆಂಬರ್ 2023 (10:23 IST)
ಅತ್ಯಾಚಾರಕ್ಕೊಳಗಾದ ಬಾಲಕಿಯ ಪ್ರಕಾರ, ಮೂವರು ಶಿಕ್ಷಕರು ಖಾಲಿಯಾಗಿದ್ದ ಕ್ಲಾಸ್ ರೂಮ್‌ಗಳಲ್ಲಿ ಹಲವಾರು ಬಾರಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆಯ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ಬೆದರಿಕೆಯೊಡ್ಡಿದ್ದರು ಎಂದು ಅಪ್ರಾಪ್ತ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.  
 
ಆಘಾತಕಾರಿ ಘಟನೆಯೊಂದರಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಮೂವರು ಶಿಕ್ಷಕರು ಗ್ಯಾಂಗ್‌ರೇಪ್ ಎಸಗಿದ ಹೇಯ ಘಟನೆ ವರದಿಯಾಗಿದೆ.
 
ಬಾಲಕಿಯ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ, ಆರೋಪಿ ಶಿಕ್ಷಕರಾದ ಸಂಜಯ್ ಪಾಟೀಲ್(47), ನಿಲೇಶ್ ಭೋಯಿರ್(47) ಮತ್ತು ಜಿತೇಂದ್ರ ಜಾಧವ್‌ರನ್ನು (23) ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಸಬ್‌ ಇನ್ಸೆಪೆಕ್ಟರ್ ತಿಳಿಸಿದ್ದಾರೆ. 
 
ಮೂವರು ಶಿಕ್ಷಕರ ಲೈಂಗಿಕ ಕಿರುಕುಳ ತಾಳದೆ ಬಾಲಕಿ, ಕಳೆದ ತಿಂಗಳು ಶಾಲೆಯಲ್ಲಿ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ತದನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದರಿಂದ ಆರೋಪಿ ಶಿಕ್ಷಕರನ್ನು ಬಂಧಿಸಿ ಅವರ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಭಾವಂತ ವಿದ್ಯಾರ್ಥಿಗೆ ಗೂಗಲ್ ನೀಡಿದ ಸಂಬಳವೆಷ್ಟು ಗೊತ್ತಾ?