Select Your Language

Notifications

webdunia
webdunia
webdunia
webdunia

ಒಕ್ಕಲಿಗ ಸಂಘದ ನಿರ್ದೇಶಕರಿಂದ ಹಾಸ್ಟೆಲ್ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

female hostel
bangalore , ಬುಧವಾರ, 22 ನವೆಂಬರ್ 2023 (16:21 IST)
ಒಕ್ಕಲಿಗ ಸಂಘದ ನಿರ್ದೇಶಕರಿಂದ ಹಾಸ್ಟೆಲ್ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿರುವ ಆರೋಪ ಕೇಳಿಬಂದಿದೆ.ಹಾಸ್ಟೆಲ್ ನ ನಿರ್ದೇಶಕರುಗಳಾದ ಗಂಗಾಧರ್ ಹಾಗೂ ರಾಜು ಮೇಲೆ ಗಂಭೀರ ಆರೋಪ ಕೇಳಿಬಂದಿದೆ.ಈಗಾಗಲೇ ಒಕ್ಕಲಿಗ ಸಂಘಕ್ಕೆ ಕೆಲವು ನಿರ್ದೇಶಕರು ದೂರು ನೀಡಿದ್ದಾರೆ.
 
ಶ್ರೀ ಗಂಧ ಕಾವಲು ನಲ್ಲಿರುವ ಮಹಿಳೆಯರ ವಸತಿ ನಿಲಯದಲ್ಲಿ ರಾತ್ರಿ ವೇಳೆ ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪ ಕೇಳಿಬಂದಿದೆ.ಘಟನೆ ಸಂಬಂಧ ಸಂಘದ ಕೆಲ ನಿರ್ದೇಶಕರಿಂದ ಅಧ್ಯಕ್ಷರಿಗೆ ದೂರು  ನೀಡಲಾಗಿದೆ.ಅಲ್ಲದೆ ಘಟನೆ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನ ಕೆಲ ನಿರ್ದೇಶಕರು ನೀಡಿದ್ದಾರೆ.ದೂರು ಬಂದ ಹಿನ್ನೆಲೆ ಕ್ರಮ ಕೈಗೊಳ್ಳುವ ಬಗ್ಗೆ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಹೇಳಿದ್ದಾರೆ.ಈ ಬಗ್ಗೆ ಲಿಖಿತ ರೂಪದಲ್ಲಿ ದೂರು ಬಂದಿದೆ, ಪರಿಶೀಲನೆ ಮಾಡಿ ಮಹಿಳೆಗೆ ನ್ಯಾಯ ನೀಡುತ್ತೇವೆ .ಈ ಸಂಬಂಧ ತಪ್ಪು ಕಂಡು ಬಂದಲ್ಲಿ ಕ್ರಮ ಜರುಗಿಸೋದಾಗಿ ಒಕ್ಕಲಿಗ ಸಂಘದ ಅಧ್ಯಕ್ಷ ಹನುಮಂತಯ್ಯ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಳನೀರು ಕಳ್ಳತನ ಮಾಡ್ತಿದ್ದ ವಿಚಿತ್ರ ಕಳ್ಳನ ಬಂಧನ