ದೆಹಲಿ ಟೆಕ್ನಾಲಾಜೀಕಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ಜಾಗತಿಕ ದೈತ್ಯ ಸಂಸ್ಥೆ ಗೂಗಲ್ ವಾರ್ಷಿಕ ಅಂದಾಜು 1.27 ಕೋಟಿ ರೂಪಾಯಿ ವೇತನದ ಆಫರ್ ನೀಡಿದೆ . ಪ್ರತಿಭಾವಂತ್ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಭವಿಷ್ಯವನ್ನು ರೂಪಿಸುತ್ತಿದೆ ಎಂದು ಹೇಳಿದ್ದಾರೆ.
ಕಕ್ಕರ್ ಪೋಷಕರು ದೆಹಲಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದಾರೆ, ತಾಯಿ ರೀಟಾ ಕಕ್ಕರ್ ಕೆಮೆಸ್ಟ್ರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ತಂದೆ ಸುಭಾಷ್ ಕಕ್ಕರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ದೆಹಲಿ ಟೆಕ್ನಾಲಾಜೀಕಲ್ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಯಾದ ಕಕ್ಕರ್ ಗೂಗಲ್ ಸಂಸ್ಥೆಯ ಆಫರ್ ಸ್ವೀಕರಿಸಿದ್ದು ವ್ಯಾಸಂಗ 2016ರಲ್ಲಿ ಮುಕ್ತಾಯಗೊಳ್ಳಲಿದ್ದು ತದ ನಂತರ ಕ್ಯಾಲಿಫೋರ್ನಿಯಾಗೆ ತೆರಳಲಿದ್ದಾರೆ.
ದೆಹಲಿ ಟೆಕ್ನಾಲಾಜೀಕಲ್ ವಿಶ್ವವಿದ್ಯಾಲಯದ ಕ್ಯಾಂಪಸ್ ಸಂದರ್ಶನದಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಆಫರ್‌ನಲ್ಲಿ 93 ಲಕ್ಷ ರೂಪಾಯಿಗಳ ವೇತನವೇ ಅಧಿಕವಾಗಿತ್ತು.
ಇಂತಹ ಅವಕಾಶಕ್ಕಾಗಿ ತುಂಬಾ ಕಷ್ಟಪಟ್ಟು ಶ್ರಮಿಸುತ್ತಿದ್ದೆ. ಗೂಗಲ್ ಸಂಸ್ಥೆಯ ಸೇರಲು ಉತ್ಸಕನಾಗಿದ್ದೇನೆ ಎಂದು ಚೇತನ್ ಕಕ್ಕರ್ ತಿಳಿಸಿದ್ದಾರೆ.