Select Your Language

Notifications

webdunia
webdunia
webdunia
webdunia

ರೇಪ್ ಎಸಗುತ್ತಿರುವ ಪುತ್ರನಿಗೆ ಬೆಂಬಲ ನೀಡಿದ ಮಹಾತಾಯಿ

mother son  rape
mizoram , ಮಂಗಳವಾರ, 21 ನವೆಂಬರ್ 2023 (12:27 IST)
ನನ್ನನ್ನು ಮನೆಗೆ ಕರೆದುಕೊಂಡು ಹೋದ ಹದಿಹರೆಯದ ಯುವಕ, ಮನೆಯಲ್ಲಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರವೆಸಗುತ್ತಿರುವಾಗ ಯುವಕನ ತಾಯಿ ಹೊರಗಡೆಯಿಂದ ಕೋಣೆಗೆ ಬೀಗಹಾಕಿದ್ದಳು ಎಂದು ಯುವತಿ ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
 
ವಿವಾಹವಾಗುವ ನೆಪದಲ್ಲಿ  ಹದಿಹರೆಯದ ಯುವತಿಯ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ ಘಟನೆ ಗಾಂಧಿ ಕ್ಯಾಂಪ್ ಪ್ರದೇಶದಲ್ಲಿ ವರದಿಯಾಗಿದೆ. 
 
 ಪಿಯುಸಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಕಾಲೇಜಿನ ಬಳಿ ಬಂದ ಯುವಕನೊಬ್ಬ, ಆಕೆಗೆ ವಿವಾಹವಾಗುವ ಭರವಸೆ ನೀಡಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. 
 
ಯುವತಿ  ನೀಡಿದ ದೂರಿನ ಮೇರೆಗೆ ಪೊಲೀಸರು ಹದಿಹರೆಯದ ಯುವಕ ಮತ್ತು ಆತನ ತಾಯಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಯುವಕನನ್ನು ಬಂಧಿಸಲಾಗಿದ್ದು, ಆತನ ತಾಯಿ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
 
ನಗರದ ಸರಕಾರಿ ಆಸ್ಪತ್ರೆಯಲ್ಲಿ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ನಂತರ ಆಕೆಯನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರದ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಯುವತಿಗೆ ಬ್ಲ್ಯಾಕ್‌ಮೇಲ್