Select Your Language

Notifications

webdunia
webdunia
webdunia
webdunia

ಪೋಷಕರಿಂದಲೇ ಲೈಂಗಿಕ ದೌರ್ಜನ್ಯ: ಕೋರ್ಟ್ ಮೊರೆಹೋದ ಪುತ್ರಿ

parents
delhi , ಮಂಗಳವಾರ, 21 ನವೆಂಬರ್ 2023 (10:55 IST)
ದೆಹಲಿಯ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಯುವತಿಯೊಬ್ಬಳು,  ನ್ಯಾಯಾಲಯದಲ್ಲಿ ದೂರು ನೀಡಿ ತನ್ನ ತಾಯಿ ಲೈಂಗಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಆಪಾದಿಸಿದ್ದಾಳೆ. 
 
ತಂದೆ ಕೂಡಾ ತಾಯಿಯಂತೆಯೇ ವರ್ತಿಸುತ್ತಿದ್ದಾರೆ. ನನ್ನ ದೇಹದ ಮುಟ್ಟಬಾರದಂತಹ ಭಾಗಗಳನ್ನು ಅಸಹ್ಯವಾಗಿ ಮುಟ್ಟುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಗೃಹ ಬಂಧನದಲ್ಲಿರಿಸಿದ್ದು,, ಅಪರೂಪಕ್ಕೊಮ್ಮೆ ಕಾಲೇಜಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. 
 
ಲೈಂಗಿಕ ಕಿರುಕುಳ ನೀಡಿದ ತಾಯಿಯ ವಿರುದ್ಧ ಪುತ್ರಿಯೊಬ್ಬಳು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರಿಂದ, ಕೋರ್ಟ್ ಆ ಮಹಾತಾಯಿಗೆ ನೋಟಿಸ್ ಜಾರಿ ಮಾಡಿದೆ.ಪೋಷಕರ ವಿರುದ್ಧ ಕೌಟಂಬಿಕ ದೌರ್ಜನ್ಯದಡಿ ಪ್ರಕರಣ ದಾಖಲಿಸಲಾಗಿದ್ದು ಮುಂದಿನ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆದೇಶ ನೀಡಿದೆ. 
 
ನನ್ನ ತಾಯಿಗೆ ಕೋಪ ಬಂದಾಗ ಲೈಂಗಿಕ ಕಿರುಕುಳ ನೀಡಿ, ದೈಹಿಕವಾಗಿ ಹಿಂಸಿಸುವುದಲ್ಲದೇ ನನ್ನ ಬಟ್ಟೆಗಳನ್ನು ಹರಿದು ನಗ್ನಗೊಳಿಸುತ್ತಾಳೆ ಎಂದು ಯುವತಿ ಆರೋಪಿಸಿದ್ದಾಳೆ.ಯುವತಿಯ ತಾಯಿಯ ವಿರುದ್ಧ ಕೌಟಂಬಿಕ ದೌರ್ಜನದಡಿ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಮೇಲೆ ರೇಪ್ ಎಸಗಿದ ವ್ಯಕ್ತಿಗೆ ಪತಿ ಮಾಡಿದ್ದು ಕೇಳಿದ್ರೆ ಬೆಚ್ಚಿ ಬೀಳ್ತಿರಿ