Select Your Language

Notifications

webdunia
webdunia
webdunia
webdunia

ವಾಯು ಮಾಲಿನ್ಯ ಪ್ರಮಾಣದದಲ್ಲಿ ಸುಧಾರಣೆ

ವಾಯು ಮಾಲಿನ್ಯ ಪ್ರಮಾಣದದಲ್ಲಿ ಸುಧಾರಣೆ
ದೆಹಲಿ , ಶನಿವಾರ, 18 ನವೆಂಬರ್ 2023 (20:23 IST)
ಅತಿ ಕಳಪೆಯಿಂದ ಸ್ವಲ್ಪ ಉತ್ತಮಗೊಂಡ ಮಾಲಿನ್ಯ ಕಳೆದ ಕೆಲವು ದಿನಗಳಿಂದ ತೀರಾ ಕಳಪೆಯಾಗಿದ್ದ ದೆಹಲಿಯ ವಾಯು ಮಾಲಿನ್ಯದ ಪ್ರಮಾಣ ನಿನ್ನೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಇಂದು ನಸುಕಿನ ವೇಳೆಯಲ್ಲೂ ದೆಹಲಿಯಲ್ಲಿ ಹಲವು ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿತ್ತು. ಇಂದು ಬೆಳಗ್ಗೆ 398 ಏರ್ ಕ್ವಾಲಿಟಿ ಇಂಡೆಕ್ಸ್​ ದಾಖಲಾಗಿದೆ.

ಬೆಳಗ್ಗೆ ಏಳು ಗಂಟೆಯವರೆಗೂ ಪ್ರಮುಖ ರಸ್ತೆಗಳಲ್ಲಿ 100 ಮೀಟರ್ ಅಂತರದವರೆಗೆ ದೃಷ್ಟಿಗೋಚರವಿರಲಿಲ್ಲ. ಆದರೆ, ಹೊತ್ತೇರಿದಂತೆ ಕೆಲವು ಬಡಾವಣೆಗಳಲ್ಲಿ ವಾತಾವರಣ ಸ್ವಲ್ಪ ತಿಳಿಯಾಗಿ, 500 ಮೀಟರ್ ವರೆಗೆ ದೃಷ್ಟಿ ಗೋಚರಿಸುವಂತಾಯ್ತು. ನವೆಂಬರ್ 14ರಿಂದ ನಿನ್ನೆಯವರೆಗೂ ಸಹ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ದೀಪಾವಳಿ ಸಮಯದಲ್ಲಿ ನಾಗರೀಕರು ಮನಬಂದಂತ ಪಟಾಕಿ ಸಿಡಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

20 ತೊಲೆಯ ಚಿನ್ನಾಭರಣ ಕದ್ದು ಎಸ್ಕೇಪ್