ಪತಿಯೊಬ್ಬ,  ಕೌಟುಂಬಿಕ ಕೋರ್ಟ್ ಸಂಪರ್ಕಿಸಿ ತಮ್ಮ ಪತ್ನಿ ಹಠಮಾರಿ, ಆಕ್ರಮಣಕಾರಿ ಮತ್ತು ಸರ್ವಾಧಿಕಾರಿಯಾಗಿದ್ದು, ಮತ್ತು  ತೃಪ್ತಿಪಡಿಸಲಾಗದಷ್ಟು ಕಾಮದಾಹವನ್ನು ಅವಳು ಹೊಂದಿದ್ದಾಳೆ. ಏಪ್ರಿಲ್ 2022ರಿಂದ ತನಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಕೋರ್ಟ್‌ಗೆ ಪತಿ ನಿವೇದಿಸಿಕೊಂಡು ವಿವಾಹ ವಿಚ್ಚೇಧನಕ್ಕೆ ಮನವಿ ಮಾಡಿಕೊಂಡ ಘಟನೆ ವರದಿಯಾಗಿದೆ. 
 
									
								
			        							
								
																	
	 
	ಕೆಲವು ಪುರುಷರು ಕಾಮಪಿಪಾಸುಗಳಂತೆ ವರ್ತಿಸುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ಮಹಿಳೆಯೊಬ್ಬರಿಗೆ ಸೆಕ್ಸ್ ಬಗ್ಗೆ ತಣಿಯಲಾರದ ಹಸಿವು, ಆಕ್ರಮಣಕಾರಿ ಮನೋಭಾವವನ್ನು ಹೊಂದಿದ್ದರು. ಅವರ ಸೆಕ್ಸ್ ದಾಹವನ್ನು ತಣಿಸಲಾಗದೇ ಅವರ ಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಕ್ಕೆ ಮುಂಬೈನ ಕೌಟುಂಬಿಕ ಕೋರ್ಟ್ ಡೈವರ್ಸ್‌ಗೆ ಅನುಮತಿ ನೀಡಿದೆ. 
 
									
										
								
																	
	 
	ತನಗೆ ಔಷಧಿಗಳನ್ನು ಕುಡಿಸಿ, ಮದ್ಯಪಾನ ಮಾಡುವಂತೆ ಬಲವಂತ ಮಾಡುತ್ತಾಳೆ ಎಂದೂ ಪತಿ ಆರೋಪಿಸಿದ್ದರು.  ಅಸಹಜ ಲೈಂಗಿಕ ಕ್ರಿಯೆ ಮಾಡುವಂತೆ ಪತ್ನಿ ಒತ್ತಾಯಿಸುತ್ತಾಳೆ. ಅದಕ್ಕೆ ಪ್ರತಿರೋಧಿಸಿದಾಗ ಬಾಯಿಗೆ ಬಂದ ಹಾಗೆ ಬಯ್ಯುತ್ತಾಳೆ. ಅವಳ ಒತ್ತಡಕ್ಕೆ ಮಣಿದು ಅಸಹಜ ಲೈಂಗಿಕ ಕ್ರಿಯೆ ಮಾಡುತ್ತಿದ್ದೆ ಎಂದು ಪತಿ ದೂರಿದ್ದಾನೆ. 
 
									
											
							                     
							
							
			        							
								
																	
	 
	 ತಾನು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದು, ಆಯಾಸವಾಗಿದ್ದಾಗಲೂ ಅವಳ ಸುಖವನ್ನು ತಣಿಸಬೇಕಾಗಿದೆ ಎಂದು ದೂರಿದ್ದರು. ತನ್ನ ಬೇಡಿಕೆಗಳನ್ನು ತಣಿಸದಿದ್ದರೆ, ಅವನ ಭಾವನೆಗಳಿಗೆ ಬೆಲೆ ಕೊಡದೇ ಇನ್ನೊಬ್ಬನ ಬಳಿಗೆ ಹೋಗುವುದಾಗಿಯೂ ಅವಳು ಬೆದರಿಕೆ ಹಾಕುತ್ತಿದ್ದಳು. 
 
									
			                     
							
							
			        							
								
																	
	 
	2012ರಲ್ಲಿ ಹೊಟ್ಟೆನೋವಿನಿಂದ ಆಸ್ಪತ್ರೆ ಸೇರಿ 2 ವಾರಗಳ ಬಳಿಕ ಮನೆಗೆ ಹಿಂತಿರುಗಿದಾಗಲೂ ಪತ್ನಿ ಲೈಂಗಿಕ ತೃಪ್ತಿ ನೀಡುವಂತೆ ಒತ್ತಾಯಿಸಿದಳು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ತನ್ನ ಪತ್ನಿ ತನ್ನ ಕ್ರೂರ ವರ್ತನೆಯಿಂದ ಜೀವನವನ್ನು ಭಯಾನಕವಾಗಿಸಿದ್ದಾಳೆ.ಅವಳ ಅತಿಯಾದ ಸೆಕ್ಸ್ ಬಯಕೆಯಿಂದ ತಾನು ಅವಳ ಜೊತೆ ಒಂದೇ ಸೂರಿನಡಿ ವಾಸಿಸಲು ಸಾಧ್ಯವಾಗುತ್ತಿಲ್ಲ ಎಂದು ಪತಿ ಕೋರಿದ್ದನು. ನ್ಯಾಯಾಧೀಶರು ಅರ್ಜಿಗೆ ಮನ್ನಣೆ ನೀಡಿ ವಿಚ್ಛೇದನಕ್ಕೆ ಅನುಮತಿ ನೀಡಿದ್ದರಿಂದ ಪತಿಯಲ್ಲಿ ಸಂತೃಪ್ತ ಭಾವ ಮೂಡಿದೆ.