Select Your Language

Notifications

webdunia
webdunia
webdunia
webdunia

ಪತ್ನಿಯಯೊಂದಿಗೆ ಇಂತಹ ಕೀಳು ಕೃತ್ಯ ಎಸಗಿದ ಪತಿ

husband
mumbai , ಶನಿವಾರ, 18 ನವೆಂಬರ್ 2023 (13:51 IST)
ಪತ್ನಿಯ ನಗ್ನ ಚಿತ್ರಗಳನ್ನೇ ಗೆಳೆಯರಿಗೆ ಕಳುಹಿಸಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಪತ್ನಿಯ ಮೇಲಿನ ಸಿಟ್ಟಿಗಾಗಿ ಆಕೆಯ ಚಿತ್ರಗಳನ್ನು ಗೆಳೆಯರಿಗೆ ಕಳುಹಿಸಿದ್ದೇನೆ ಎಂದು ಆರೋಪಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ.
 
ಹೆಂಡತಿಯ ಅಶ್ಲೀಲ ಚಿತ್ರ ತೆಗೆದು ಸ್ನೇಹಿತರಿಗೆ ಇಮೇಲ್‌ ಮಾಡಿದ ಆರೋಪದ ಮೇಲೆ ಮುಂಬೈನ ಸಾಪ್ಟ್ವೇರ್‌ ಇಂಜನೀಯರ್‌ ಒಬ್ಬನನ್ನು  ಪೊಲೀಸರು ಬಂಧಿಸಿದ್ದಾರೆ.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನುಆತನ ಮುಂಬೈನ ನಿವಾಸದಲ್ಲಿ ಸೈಬರ್‌ ಅಪರಾಧ ಪೊಲೀಸರು ಬಂಧಿಸಿದ್ದಾರೆ ಎಂದು ಸಿಐಡಿ ಹೆಚ್ಚುವರಿ ಡಿಜಿಪಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
 
 ಪತ್ನಿ ಆಂಧ್ರದ ಗುಂಟೂರಿನವಳಾಗಿದ್ದು, ಪತಿ ಮೊದಲ ಮದುವೆಯನ್ನು ಮುಚ್ಚಿಟ್ಟಿದ್ದಾನೆ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಈಕೆ ನನ್ನ ಅಶ್ಲೀಲ ಚಿತ್ರಗಳು ಹರಿದಾಡಲು ಗಂಡ ಭಾಗಿಯಾಗಿದ್ದಾನೆ ಎಂದು ಆರೋಪಿಸಿ ಕಳೆದ ವರ್ಷ ದೂರು ನೀಡಿದ್ದಳು.

ಮೊದಲ ಮದುವೆಯಾಗಿರುವುದು ತಿಳಿದು ಬಂದ ಬಳಿಕ ಪತಿಯನ್ನು ತ್ಯಜಿಸಿ ಆಕೆ ತವರಿಗೆ ತೆರಳಿದ್ದಳು. ಈ ಸಿಟ್ಟಿಗೆ ಆರೋಪಿ ತನ್ನ ಪತ್ನಿಯ ಹೆಸರಿನಲ್ಲಿ ಅಶ್ಲೀಲ ಇ ಮೇಲ್‌ ಕಳುಹಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿತದ ಚಟ: ಪತ್ನಿಯನ್ನೇ ಮಾರಾಟ ಮಾಡಿದ ಭೂಪ