Select Your Language

Notifications

webdunia
webdunia
webdunia
webdunia

ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಬಂಧನ

Gang rape
kolkatta , ಶನಿವಾರ, 18 ನವೆಂಬರ್ 2023 (10:06 IST)
ಯುವತಿ ತನ್ನ ಗೆಳೆಯನೊಂದಿಗೆ ತೆರಳಿದ್ದ ಸಂದರ್ಭದಲ್ಲಿ ಐದು ಜನ ಯುವಕರು ಆಕೆಯನ್ನು ಹೊತ್ತೊಯ್ದು ಕ್ರೂರವಾಗಿ ಅತ್ಯಾಚಾರ ಎಸಗಿದ ದಾರುಣ ಘಟನೆ ವರದಿಯಾಗಿದೆ. 
 
ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರದ ಎರಡನೇ ಆರೋಪಿ  ಕ್ರೈಂ ಬ್ರಾಂಚ್‌ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ. 19 ವರ್ಷದ ಆರೋಪ  ಯುವತಿ ಮೇಲೆ ಅತ್ಯಾಚಾರ ಎಸಗಿದ ಎರಡನೇ ವ್ಕಕ್ತಿಎಂದು ಪೋಲೀಸರು ತಿಳಿಸಿದ್ದಾರೆ.
 
ಸಾರ್ವಜನಿಕರ ತೀವ್ರ ಪ್ರತಿಭಟೆನೆಯಿಂದಾಗಿ ಪೋಲೀಸ್‌ ಕಮಿಷನರ್‌  ಅವರು ಇಪ್ಪತ್ತಕ್ಕೂ ಹೆಚ್ಚು ತಂಡವನ್ನು ರಚಿಸಿದ್ದರು. ಅದರಲ್ಲಿ 10 ಜನರು ಕ್ರೈಂ ಬ್ರಾಂಚ್‌ನ ವಿಶೇಷ ಪೋಲೀಸರು ಇದ್ದರು. ಅಪರಾಧದ ಬೆನ್ನು ಹತ್ತಿದ ವಿಶೆಷ ಪೋಲೀಸ್‌ ತಂಡ ಆರೋಪಿಗಳ ಜಾಡು ಹಿಡಿದು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಇಬ್ಬರು ಆರೋಪಿಗಳು ಕಂಬಿಯ ಹಿಂದೆ ಬಂಧಿಯಾಗಿದ್ದು ಇನ್ನುಳಿದವರಿಗಾಗಿ ತನಿಖೆ ನಡೆಯುತ್ತಿದೆ.
 
ಅತ್ಯಾಚಾರಿಗಳು ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆರೋಪಿಗಳಿಗೆ ಪಕ್ಕಾ ಶಿಕ್ಷೆಯಾಗುತ್ತದೆ. ಇದಕ್ಕಾಗಿ ಸೂಕ್ತ ಸಾಕ್ಷಾಧಾರಗಳನ್ನು ಕಲೆಹಾಕಲಾಗುತ್ತಿದೆ ಎಂದು ಪೋಲೀಸ್‌ ಕಮಿಷನರ್‌ ಭರವಸೆ ನೀಡಿದ್ದಾರೆ.
 
ಸದ್ಯಕ್ಕೆ ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಯುವತಿಗೆ ಆಂತರಿಕವಾಗಿ ಹೆಚ್ಚು ಗಾಯಗಳಾಗಿವೆ ಎಂದು ತಪಾಸಣೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ದೆಹಲಿ ಸಾಮೂಹಿಕ ಅತ್ಯಾಚಾರದ ನಂತರ ನಡೆದ ಮತ್ತೊಂದು ಹ್ಯೇಯ ಅತ್ಯಾಚಾರ ಪ್ರಕರಣ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಪುತ್ರಿಯನ್ನೇ ಮಾರಾಟ ಮಾಡಲು ಹೊರಟ ಹೆತ್ತ ತಾಯಿ