Publish Date: Sat, 18 Nov 2023 (08:23 IST)
Updated Date: Sat, 18 Nov 2023 (08:26 IST)
ವೇಶ್ಯಾವಾಟಿಕೆ ಮೇಲೆ ಪೊಲೀಸ್ ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ. ಗ್ರಾಹಕರಿಂದ ಗಂಟೆಗೆ 1 ಸಾವಿರದಿಂದ 5 ಸಾವಿರ ರೂಪಾಯಿಗಳವರೆಗೆ ದರವನ್ನು ನಿಗಿದಿಪಡಿಸಿದ್ದರು ಎನ್ನಲಾಗಿದೆ. ಒಂದು ರಾತ್ರಿಗೆ 5 ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ಕೀಳುತ್ತಿದ್ದರು. ಇವರ ಹೆಚ್ಚಿನ ಗ್ರಾಹಕರು ಶ್ರೀಮಂತ ಉದ್ಯಮಿಗಳಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಲಾಡ್ಜ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಇಬ್ಬರು ಮಹಿಳೆಯರು ಸೇರಿದಂತೆ ಓರ್ವ ಪುರುಷನನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸಾವಿರಾರು ರೂಪಾಯಿಗಳು ಸೇರಿದಂತೆ ,ಬ್ಲ್ಯೂಫಿಲ್ಮ್ ಸಿಡಿಗಳು ಮತ್ತು ಕಾಂಡೋಮ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನೆರೆಯ ರಾಜ್ಯಗಳಲ್ಲಿರುವ ವೇಶ್ಯಾವಾಟಿಕೆಗಳೊಂದಿಗೆ ಸಂಪರ್ಕವಿರಿಸಿಕೊಂಡು, ಗ್ರಾಹಕರ ಇಚ್ಚೆಗೆ ಅನುಸಾರವಾಗಿ ಯುವತಿಯರನ್ನು ಒದಗಿಸುತ್ತಿದ್ದರು.
ಮಾಜಿ ಸಚಿವರ ಸಂಬಂಧಿಕರೊಬ್ಬರಿಗೆ ಸೇರಿದ ರಾಮದೇವ್ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ಹಲವು ತಿಂಗಳುಗಳಿಂದ ನಡೆಯುತ್ತಿತ್ತು. ಆದರೆ, ಲಾಡ್ಜ್ ಪ್ರಭಾವಿ ಮುಖಂಡರಿಗೆ ಸೇರಿದ್ದರಿಂದ ದಾಳಿ ನಡೆಸಲು ಪೊಲೀಸರು ಹಿಂದೇಟು ಹಾಕುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು
ಪೊಲೀಸ್ ಠಾಣೆಯ ಅಧಿಕಾರಿ ಇದೀಗ ತಮ್ಮ ತಂಡದೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.