Select Your Language

Notifications

webdunia
webdunia
webdunia
webdunia

ಪ್ರೇಯಸಿಯೊಂದಿಗೆ ಚೆಲ್ಲಾಟ: ಪತ್ನಿ ಕೈಗೆ ರೆಡ್‌ಹ್ಯಾಂಡ್‌ ಸಿಕ್ಕಿಬಿದ್ದ ಪತಿ

wife
chennai , ಶನಿವಾರ, 18 ನವೆಂಬರ್ 2023 (11:22 IST)
ಹೆಂಡತಿಯ ಕಣ್ಣಿಗೆ ಮಣ್ಣೆರಚಿ ಪ್ರೇಯಸಿಯ ಜತೆ ಸರಸಸಲ್ಲಾಪದಲ್ಲಿ ನಿರತನಾಗಿದ್ದ ಆರೋಪಿ ರೆಡ್ ಹ್ಯಾಂಡ್‌ ಆಗಿ ಪತ್ನಿಯ ಕೈಗೆ ಸಿಕ್ಕಿಬಿದ್ದ ಪ್ರಸಂಗ ಚೆನ್ನೈನಲ್ಲಿ ವರದಿಯಾಗಿದೆ.
 
ಆರೋಪಿಗೆ ಮದುವೆಗೆ ಮುಂಚೆಯೇ ಕಿರುತೆರೆಯ ನಟಿಯ ಜತೆ ಅಕ್ರಮಸಂಬಂಧವಿತ್ತು. ಆದರೆ ಈ ವಿಷಯವನ್ನು ಮುಚ್ಚಿಟ್ಟು, ಅವನು ಬೇರೊಬ್ಬ ಯುವತಿಯೊಂದಿಗೆ ವಿವಾಹವಾಗಿದ್ದ. ಆದರೆ ಮದುವೆಯಾದ ಮೇಲೆ ತನ್ನ ಚಪಲಚೆನ್ನಿಗರಾಯ ಪ್ರವೃತ್ತಿಯನ್ನು ನಿಲ್ಲಿಸದ ಅವನು ಕದ್ದುಮುಚ್ಚಿ ಪ್ರೇಯಸಿಯ ಮನೆಗೆ ತೆರಳಿ ಚಕ್ಕಂದವಾಡುತ್ತಿದ್ದ.
 
ಸದಾ ಪ್ರೇಯಸಿಯ ಮನೆಯಲ್ಲಿರುತ್ತಿದ್ದ ಆರೋಪಿ ಹೆಂಡತಿಯನ್ನು ನಿರ್ಲಕ್ಷಿಸಿದ. ತನ್ನ ಮಗುವಿನ ಮುಖವನ್ನು ಕೂಡ ಅವನು ಸರಿಯಾಗಿ ನೋಡಿರಲಿಲ್ಲ. ಪತಿಯ ಅನೈತಿಕ ಸಂಬಂಧದ ಸುಳಿವು ಪತ್ನಿಗೆ ಸಿಕ್ಕಿ, ಅವನು ಪ್ರೇಯಸಿಯ ಮನೆಯಲ್ಲಿದ್ದಾಗ ಪತ್ನಿ ಪೊಲೀಸರ ಜತೆ ಅಲ್ಲಿಗೆ ತೆರಳಿ ಬಾಗಿಲು ತಟ್ಟಿದಾಗ ಎಷ್ಟು ಹೊತ್ತಾದರೂ ಬಾಗಿಲು ತೆರೆಯಲಿಲ್ಲ. ನಂತರ ಬಾಗಿಲು ತೆರೆದಾಗ ಗಂಡ ಪ್ರೇಯಸಿಯ ಜತೆ ಸಿಕ್ಕಿಬಿದ್ದು ಪೇಚಿಗೀಡಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೊತೆಯಲ್ಲಿದ್ದವರಿಂದಲೇ ಯುವತಿಯ ಮೇಲೆ ರೇಪ್