Select Your Language

Notifications

webdunia
webdunia
webdunia
webdunia

ಸೊಸೆ ಮೇಲೆಯೇ ನಿರಂತರ ರೇಪ್ ಎಸಗುತ್ತಿದ್ದ ಕಿರಾತಕ ಮಾವ ಪರಾರಿ

man
uttarakhand , ಮಂಗಳವಾರ, 21 ನವೆಂಬರ್ 2023 (14:15 IST)
ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಿಳೆ ಮೇಲೆ ತನ್ನ ಮಾವನೇ ಕಣ್ಣು ಹಾಕಿದ್ದ. ಮದುವೆ ಆದಾಗಿನಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ. ಆದರೆ ಮತ್ತೆ ಸಹಕರಿಸಲಿಲ್ಲ ಎಂಬ ಕಾರಣದಿಂದ ಕುಪಿತಗೊಂಡ ಪಾಪಿ ಮಾವ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಮಾವನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
 
ಬಳಿಕ ನೆರೆ ಮನೆಯವರನ್ನು ಕರೆದು ತಾನೇ ಹಚ್ಚಿಕೊಂಡಿದ್ದಾಳೆ ಎಂಬ ಸಬೂಬು ಹೇಳಿ ನಾಟಕವಾಡುವ ಮೂಲಕ ಬೆಂಕಿ ಆರಿಸಲೂ ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ. 
 
ತನ್ನ ಸೊಸೆ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಮಾವನೋರ್ವನೊಂದಿಗೆ ಮತ್ತೊಮ್ಮೆ ಸಹಕರಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ಪರಿಣಾಮ ಮಹಿಳೆಯೋರ್ವಳು ಇಂದು ಕೊನೆಯುಸಿರೆಳೆದಿದ್ದಾಳೆ. 
 
ಮೃತ ಮಹಿಳೆಯು ಉತ್ತರಾಖಂಡ ಮೂಲದವಳು ಎಂದು ಹೇಳಲಾಗಿದ್ದು, ಈಕೆಯ ಮಾವನೇ ಕಳೆದ 8 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಎಂಬುದಾಗಿ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.  
 
ಘಟನೆಯನ್ನು ಕಂಡ ಸ್ಥಳೀಯರು, ಗಾಯಾಳು ಮಹಿಳೆಯನ್ನು ಉತ್ತರಾಖಂಡ  ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾಳೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಂಡಿನ ಮತ್ತೆ ಗಮ್ಮತ್ತು: ಕುಡಿದು ಮನೆಗೆ ಬಂದ ಪತ್ನಿಗೆ ಪತಿ ಏನ್ ಮಾಡ್ದ ಗೊತ್ತಾ?