Select Your Language

Notifications

webdunia
webdunia
webdunia
webdunia

ಗುಂಡಿನ ಮತ್ತೆ ಗಮ್ಮತ್ತು: ಕುಡಿದು ಮನೆಗೆ ಬಂದ ಪತ್ನಿಗೆ ಪತಿ ಏನ್ ಮಾಡ್ದ ಗೊತ್ತಾ?

husband
delhi , ಮಂಗಳವಾರ, 21 ನವೆಂಬರ್ 2023 (12:58 IST)
ದಕ್ಷಿಣ ದೆಹಲಿಯ ನಿವಾಸಿಯಾದ ಆರೋಪಿ , ಮದ್ಯ ಸೇವಿಸಿ ಮನೆಗೆ ಬಂದ ಪತ್ನಿಯನ್ನು ಹತ್ಯೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಆಕೆಗೆ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ ಕೋಪದ ಭರದಲ್ಲಿ ಮನಬಂದಂತೆ ಥಳಿಸಿ ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.
 
ಮದ್ಯ ಸೇವಿಸಿದ ಮತ್ತಿನಲ್ಲಿ ರಾತ್ರಿ 10 ಗಂಟೆಗೆ ಮನೆಗೆ ಬಂದ ಪತ್ನಿಯನ್ನು ಕೋಪದ ಭರದಲ್ಲಿ ಮನಬಂದಂತೆ ಥಳಿಸಿ ಹತ್ಯೆಗೈದ ಪತಿಮಹಾಶಯನಿಗೆ ದೆಹಲಿ ಕೋರ್ಟ್ 10 ವರ್ಷಗಳ ಶಿಕ್ಷೆಯನ್ನು ವಿಧಿಸಿದೆ.
 
ಹೆಚ್ಚುವರಿ ನ್ಯಾಯಮೂರ್ತಿ ಅವರು , ಪತ್ನಿ ಮನೆಯಲ್ಲಿರದೇ ಇರುವುದು, ರಾತ್ರಿ 10 ಗಂಟೆಗೆ ಮದ್ಯ ಸೇವಿಸಿ ಮನೆಗೆ ಮರಳಿರುವುದು, ಆರೋಪಿಯ ಕೋಪಕ್ಕೆ ಕಾರಣವಾಗಿ ಘಟನೆ ನಡೆದಿದ್ದರಿಂದ ಶಿಕ್ಷೆ ಪ್ರಮಾಣದಲ್ಲಿ ಕಡಿತಗೊಳಿಸಿ ಆದೇಶ ಹೊರಡಿಸಿದ್ದಾರೆ.
 
ಇಂತಹ ಸಂದರ್ಭಗಳಲ್ಲಿ ಪತಿಗೆ ಕೋಪ ಬರುವುದು ಸಹಜ. ಆದರೆ, ತಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು ಹಲ್ಲೆ ಮಾಡಬಾರದಾಗಿತ್ತು. ಈ ಸಂದರ್ಭದಲ್ಲಿ ಆಕೆಯ ಹತ್ಯೆ ಮಾಡುವ ಉದ್ದೇಶವಿರುವುದಿಲ್ಲ. ಆದರೆ, ಆಕೆಯ ಮೇಲೆ ಹಲ್ಲೆ ಮಾಡಿ ಗಾಯಗೊಳಿಸುವುದಾಗಿರುತ್ತದೆ ಎಂದು ತಿಳಿಸಿದ್ದಾರೆ.
 
ಆರೋಪಿ ಮತ್ತು ಆತನ ಪತ್ನಿ ಲವ್‌ಮ್ಯಾರೇಜ್‌ ಮಾಡಿಕೊಂಡಿದ್ದಾರೆ, ಪತಿ ಮತ್ತು ಪತ್ನಿಯ ಮಧ್ಯೆ ಪರಸ್ಪರ ತಿಳುವಳಿಕೆಯಿರಬೇಕಾಗಿತ್ತು ಎಂದು ಕೋರ್ಟ್ ಹೇಳಿಕೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಪ್ ಎಸಗುತ್ತಿರುವ ಪುತ್ರನಿಗೆ ಬೆಂಬಲ ನೀಡಿದ ಮಹಾತಾಯಿ