Select Your Language

Notifications

webdunia
webdunia
webdunia
webdunia

ಹಣತೆಗಳ ಸಾಲಿನ ಬೆಳಕಿನಲ್ಲಿ ಮೂಡಿಬಂದ ರಾಮ

ಅಯೋಧ್ಯೆಯಲ್ಲಿ ರಾಮ

geetha

ದಕ್ಷಿಣ ಕನ್ನಡ , ಶನಿವಾರ, 20 ಜನವರಿ 2024 (19:00 IST)
ದಕ್ಷಿಣ ಕನ್ನಡ : ಸಾಲಾಗಿ ಹಚ್ಚಿಟ್ಟ ದೀಪಗಳ ಸಾಲಿನಲ್ಲಿ ಅಯೋಧ್ಯೆಯ‌ ಶ್ರೀರಾಮನ ಚಿತ್ರ ಬಿಡಿಸುವ ಮೂಲಕ ಮೂಡುಬಿದಿರೆ ಒಂಟಿಕಟ್ಟೆಯ ಅಯ್ಯಪ್ಪ ಮಂದಿರದಲ್ಲಿ ಹೊಸ ಕಲಾಕೃತಿ ಮೂಡಿಸಲಾಗಿದೆ. ಕಲಾವಿದರಾದ ತಿಲಕ್‌ ಕುಲಾಲ್‌, ರೋಹಿತ್‌ ನಾಯ್ಕ್‌, ಅಕ್ಷಿತ್‌ ಕುಲಾಲ್‌ ಊರಿನ ಜನರ ಸಹಕಾರದೊಂದಿಗೆ  ಈ ವಿಶಿಷ್ಟ ಕಲಾಕೃತಿ ಮೂಡಿಸಿದ್ದಾರೆ. 

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನಾ ಕಾರ್ಯಕ್ಕೆ ಇನ್ನು ಕೇವಲ ಎರಡು ದಿನಗಳಷ್ಟೆ ಬಾಕಿ ಉಳಿದಿದೆ. ದೇಶದ ಜನತೆ ವಿವಿಧ ರೀತಿಯಿಂದ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಿದ್ದು, ಈ ಸಾಲಿನಲ್ಲಿ ಮೂಡುಬಿದಿರಿಯಲ್ಲಿ ನಡೆದ ಕಾರ್ಯಕ್ರಮವೊಂದು ಸೇರ್ಪಡೆಯಾಗಿದೆ. ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರಾದ ಕೋಟಾ ಶ್ರೀನಿವಾಸ ಪೂಜಾರಿ ಈ ದೃಶ್ಯವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಚಕ್ರವರ್ತಿ ಸೂಲಿಬೆಲೆ ವಿರುದ್ದ ದೂರು ದಾಖಲು