Select Your Language

Notifications

webdunia
webdunia
webdunia
webdunia

ಚಕ್ರವರ್ತಿ ಸೂಲಿಬೆಲೆ ವಿರುದ್ದ ದೂರು ದಾಖಲು

ಚಕ್ರವರ್ತಿ ಸೂಲಿಬೆಲೆ

geetha

ಕಲಬುರಗಿ , ಶನಿವಾರ, 20 ಜನವರಿ 2024 (18:42 IST)
ಕಲಬುರಗಿ : ರಾಯಚೂರಿನಲ್ಲಿ ನಡೆದ ನಮೋ ಭಾರತ ಎಂಬ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಚಕ್ರವರ್ತಿ ಸೂಲಿಬೆಲೆ ಖರ್ಗೆ ಕುಟುಂಬದ ಭ್ರಷ್ಟಾಚಾರವನ್ನು ಉಲ್ಲೇಖಿಸಿ, ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. 
 
ಚಕ್ರವರ್ತಿ ಸೂಲಿಬೆಲೆಯವರನ್ನು ಗಡೀಪಾರು ಮಾಡಬೇಕೆಂದು ಕಾಂಗ್ರೆಸ್‌ ಪಕ್ಷವೂ ಸಹ ಆಗ್ರಹಿಸಿ ಟ್ವೀಟ್ ಮಾಡಿದೆ. ಬೆಂಗಳೂರಿನಲ್ಲಿ ಶುಕ್ರವಾರ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ಕಾಂಗ್ರೆಸ್‌ ವಕ್ತಾರ ರಮೇಶ್‌ ಬಾಬು ಚಕ್ರವರ್ತಿ ಸೂಲಿಬೆಲೆ ವರ್ತನೆಯನ್ನು ಟೀಕಿಸಿದ್ದರು. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಅವಾಚ್ಯ ಶಬ್ದಗಳಲ್ಲಿ ಅವಹೇಳನಕಾರಿ ಭಾಷಣ ಮಾಡಿದ ಆರೋಪದಡಿಯಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ದ ದೂರು ದಾಖಲಿಸಲಾಗಿದೆ. ಕಲಬುರಗಿ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ್‌,  ಪೊಲೀಸ್‌ ಆಯುಕ್ತ ಆರ್‌.ಚೇತನ್‌ ಅವರಿಗೆ ದೂರು ಸಲ್ಲಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ ಗೆ ರಾಜೀನಾಮೆ ಕೊಟ್ಟ ಶಾಸಕ!