Select Your Language

Notifications

webdunia
webdunia
webdunia
webdunia

ಅನಂತ್ ಕುಮಾರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ- ವಿಜಯೇಂದ್ರ

ವಿಜಯೇಂದ್ರ

geetha

bangalore , ಮಂಗಳವಾರ, 16 ಜನವರಿ 2024 (14:20 IST)
ಬೆಂಗಳೂರು-ಸಂಸದ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆಗಳ ವಿಚಾರವಾಗಿ ನಗರದಲ್ಲಿ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.ಮೊದಲೇ ರಾಜಕಾರಣಿಗಳು ಅಂದ್ರೆ ಜನ‌ ನಂಬಲ್ಲ, ಅಂಥ‌ ಪರಿಸ್ಥಿತಿ‌ ಇದೆ.ಯಾರೇ ಇದ್ರೂ ನಮ್ಮ ಹೇಳಿಕೆ ಗಂಭೀರವಾಗಿರಬೇಕು.ಸಮಾಜ ಒಪ್ಪುವಂತೆ ಮಾತು ಇರಬೇಕು.ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗಳನ್ನು ನಾನೂ ಗಮನಿಸಿದ್ದೇನೆ.ನಾನು ಅವರ ಜತೆಗೂ ಇದರ ಬಗ್ಗೆ ಮಾತಾಡ್ತೇನೆ.ಅನಂತ್ ಕುಮಾರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ.ಅವರು ಹೇಳಿರೋದೆಲ್ಲ ಅವರ ವೈಯಕ್ತಿಕ ಅಭಿಪ್ರಾಯಗಳು ಇದರ ಬಗ್ಗೆ ಅವರ ಜತೆ ವೈಯಕ್ತಿಕವಾಗಿ ಮಾತಾಡ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.
 
ವಿ‌.ಸೋಮಣ್ಣ  ದೆಹಲಿ ಹೈಕಮಾಂಡ್ ನಾಯಕರ ಭೇಟಿ ವಿಚಾರವಾಗಿ ಇತ್ತೀಚೆಗೆ ‌ನಡೆದ‌ ಚುನಾವಣೆಯಲ್ಲಿ ಎರಡೂ‌ ಕಡೆ ಗೆಲ್ತೇವೆ ಅಂತಾ ಹೋಗಿದ್ರು.. ಆದ್ರೆ ಪರಾಭವಗೊಂಡಿದ್ರು.ನಮಗೂ ನೋವಿದೆ.ಸೋಮಣ್ಣ ‌ಲೋಕಸಭಾ ಸ್ಪರ್ಧೆಗೆ ರಾಜ್ಯ‌ ಬಿಜೆಪಿ ಸಹಮತ‌ ಇದೆಯಾ?ಯಾರೇ ಸ್ಪರ್ಧಿಸಿದರೂ‌ ರಾಷ್ಟ್ರೀಯ ‌ನಾಯಕರು ತೀರ್ಮಾನ ಮಾಡಲಿದೆ.ವಿಜಯೇಂದ್ರ‌ ಅಲ್ಲ ತೀರ್ಮಾನ ಮಾಡೋದು.ಹೈಕಮಾಂಡ್ ತೀರ್ಮಾನವನ್ನು ‌ಕಾರ್ಯಕರ್ತನಾಗಿ ನಾವು ಮಾಡ್ತೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಯಾರಿಗೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎಂದು ನನಗೆ ಗೊತ್ತಿದೆ: ಅನಂತಕುಮಾರ್ ಹೆಗ್ಡೆ