Select Your Language

Notifications

webdunia
webdunia
webdunia
webdunia

ಇಲ್ಲಿ ಹಸುಗಳ ಸಗಣಿಯಿಂದ ರಾಖಿ ತಯಾರಿಸುತ್ತಾರಂತೆ

ಇಲ್ಲಿ ಹಸುಗಳ ಸಗಣಿಯಿಂದ ರಾಖಿ ತಯಾರಿಸುತ್ತಾರಂತೆ
ಉತ್ತರ ಪ್ರದೇಶ , ಗುರುವಾರ, 1 ಆಗಸ್ಟ್ 2019 (09:22 IST)
ಉತ್ತರ ಪ್ರದೇಶ : ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಹಸು ಆಶ್ರಯದಾಮವೊಂದು ಹಸುವಿನ ಸಗಣಿಯಿಂದ ರಾಖಿಗಳನ್ನು ತಯಾರಿಸುತ್ತದೆಯಂತೆ.




ಇದನ್ನು 52 ವರ್ಷದ ಎನ್ ಆರ್ ಐ ಕಂಡುಹಿಡಿದಿದ್ದು, ಇವರು ಈ ಕೆಲಸಕ್ಕಾಗಿ ಇಂಡೋನೇಷ್ಯಾದಲ್ಲಿ ತನ್ನ ಉದ್ಯೋಗವನ್ನು ಬಿಟ್ಟು ಬಂದಿದ್ದಾರಂತೆ. ಅವರು ಈ ವರ್ಷದ ಕುಂಭಮೇಳ ಕಾರ್ಯಕ್ರಮದಲ್ಲಿ  ಸಗಣಿಯಿಂದ ಮಾಡಿದ ರಾಖಿಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಇದು ಜನಸಾಮಾನ್ಯರಿಗೆ ಇಷ್ಟವಾಗಿದೆಯಂತೆ. ಹಾಗೇ ಅಲ್ಲಿನ ಸಂತರು ಹಾಗೂ ಗುರುಗಳ ಕೋರಿಕೆಯ ಮೇರೆಗೆ  ಈ ರಾಖಿಗಳನ್ನು ಈಗ ಬಿಜ್ನೋರ್ ಮತ್ತು ಉತ್ತರಪ್ರದೇಶದ ಇತರ ಭಾಗಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು ,  ಈ ಬಾರಿ ಹಬ್ಬಕ್ಕೆ ಈ ರಾಖಿಗಳನ್ನು ಎಲ್ಲಾ ಕಡೆ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ.


ಚೀನಿ ರಾಖಿಗಳಿಗೆ ವಿರುದ್ಧವಾಗಿರುವ ಈ ರಾಖಿಗಳು ಪರಿಸರ ಸ್ನೇಹಿಯಾಗಿದ್ದು, ಅವುಗಳ ಬಳಕೆಯ ನಂತರ ಅದನ್ನು ಎಸೆದರೆ ಅದು ಮಣ್ಣಲ್ಲಿ ಕೊಳೆತು ಗೊಬ್ಬರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಇವರು ಹಸುಗಳ ಸಗಣಿಯಿಂದ ಕೇಕ್ ಕೂಡ ತಯಾರಿಸುತ್ತಿದ್ದು, ಇದನ್ನು ಶವಸಂಸ್ಕಾರಕ್ಕೆ ಬಳಸಲಾಗುತ್ತದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

17 ಟನ್ ಇರುವ ಟ್ರಕ್ ನ್ನು ಒಂದು ಗಂಟೆಗಳ ಕಾಲ ಎತ್ತಿ ಹಿಡಿದಿದೆಯಂತೆ ಈ ಅಂಟು